ಬೆಂಗಳೂರು ನಗರ
ಬೆಂಗಳೂರಿನಲ್ಲಿ ಹರಡುತ್ತಿದೆ ಮಹಾಮಾರಿ :ಎಸ್ ಐಟಿ ತಂಡಕ್ಕೆ ವಕ್ಕರಿಸಿದ ಕೊರೊನಾ!
ಬೆಂಗಳೂರು : ಕೋವಿಡ್ ಎರಡನೇ ಅಲೆ ಜನಜೀವನವನ್ನು ಅಸ್ತವ್ಯಸ್ತ ಮಾಡಿ ಆರೋಗ್ಯ ತುರ್ತು ಪರಿಸ್ಥಿಯತ್ತ ರಾಜ್ಯವನ್ನು ಕೊಂಡೊಯ್ಯೂತ್ತಿದ್ದು, ಪೊಲೀಸರಿಗೂ ಸಾಕಷ್ಟು ರೀತಿಯಲ್ಲಿ ಹೈರಾಣಾಗಿಸಿದೆ. ಈಗ ಎಸ್.ಐ.ಟಿ ತಂಡದಲ್ಲೂ ಸಾಕಷ್ಟು ಮಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಮಾಹಿತಿ ಹೊರಬೀಳುತ್ತಿದೆ. ಹೀಗೆ ಮುಂದುವರೆದರೆ ತನಿಖೆ ಮಂದ ಗತಿಯಲ್ಲಿ ಸಾಗುವ ಆತಂಕ ಹೆಚ್ಚಿದೆ.
ಆಡುಗೋಡಿ ಪೊಲೀಸ್ ಠಾಣೆಯ ಎ.ಸಿ.ಪಿ ಆಗಿರುವ ಸುಧೀರ್ ಹೆಗ್ಡೆಗೆ ಪಾಸಿಟಿವ್ ಎಂದು ದೃಢಪಟ್ಟಿದ್ದು, ಎಸ್.ಐ.ಟಿ ಪ್ರಮುಖ ತನಿಖಾಧಿಕಾರಿಯಲ್ಲಿ ಒಬ್ಬರಾಗಿದ್ದಾರೆ. ಕೊರೊನ ಪಾಸಿಟಿವ್ ಬಂದ ನಂತರ ಹೋಮ್ ಐಸೊಲೇಷನ್ನಲ್ಲಿ ಇರುವ ಎ.ಸಿ.ಪಿ ಸುಧೀರ್ ಹೆಗ್ಡೆ, ಆತಂಕ ಪಡುವ ಅಗತ್ಯವಿಲ್ಲ. ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.
Share
Continue Reading
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com