Thursday, 29 Oct, 7.00 am All Indian News 24x7

ಬೆಂಗಳೂರು ನಗರ
ಬಿಎಸ್ ವೈಗೆ ಆರ್.ಆರ್. ನಗರ-ಶಿರಾ ಕ್ಷೇತ್ರಗಳ ಗೆಲುವಿನ ಕಾಣಿಕೆ ನೀಡುತ್ತೇವೆ :ಆರ್.ಅಶೋಕ್

ಬೆಂಗಳೂರು : ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ರಾಜಾಹುಲಿ, ಬೇರೆ ಹುಲಿಗಳಿಲ್ಲ ಎಂದು ಕಂದಾಯ ‌ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬಿಜೆಪಿ ನಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್​ನ​ಲ್ಲಿ ಸಾಕಷ್ಟು ಹುಲಿಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕರ್ಚೀಪ್​ ಹಾಕಿ ಕುಳಿತಿವೆ.

ಎರಡು ಉಪ ಚುನಾವಣಾ ಕ್ಷೇತ್ರಗಳನ್ನು ಗೆದ್ದು, ನಾವು ನಮ್ಮ ನಾಯಕ ಯಡಿಯೂರಪ್ಪ ಅವರಿಗೆ ಗೆಲುವಿನ ಕಾಣಿಕೆ ಕೊಡಲಿದ್ದೇವೆ ಎಂದರು. ಆರ್.ಆರ್. ನಗರ ಕುರುಕ್ಷೇತ್ರದಲ್ಲಿ ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದ್ದು, ಪ್ರೊಟೆಸ್ಟ್ ರಾಜಕಾರಣ ಮಾಡುತ್ತಿದೆ. ಡಿ.ಕೆ.ಶಿವಕುಮಾರ್‌ ಶಸ್ತ್ರ ತ್ಯಾಗ ಮಾಡಿ ಚುನಾವಣಾ ರಂಗದಿಂದ ಪಲಾಯನ ಮಾಡಿದ್ದಾರೆ.

ಸಿದ್ದರಾಮಯ್ಯ ಪದೇ ಪದೆ ಬಿಜೆಪಿಯವರಿಗೆ ಧಮ್ ಇದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಇಡೀ ದೇಶದಲ್ಲಿ ಬಿಜೆಪಿ ತನ್ನ ಸಾಮರ್ಥ್ಯ ಏನು ಎಂದು ತೋರಿಸಿದೆ. ನಿಮಗೆ ಧಮ್ ಇದ್ದರೆ ನಿಮ್ಮ ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷರನ್ನು ಬದಲಾವಣೆ ಮಾಡಿ. ಪರ್ಮನೆಂಟ್ ಅಧ್ಯಕ್ಷರ ನೇಮಕ ಮಾಡಿ ಎಂದು ಸವಾಲೆಸೆದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top