Sunday, 20 Sep, 4.57 pm All Indian News 24x7

ಬೆಂಗಳೂರು ನಗರ
ಡಾ. ಅಕೈ ಪದ್ಮಶಾಲಿ ಕಾಂಗ್ರೆಸ್ ಸೇರ್ಪಡೆ :ಸನ್ಮಾನಿಸಿ ಸ್ವಾಗತಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು : ಮಂಗಳಮುಖಿಯರ ಸಂಘಟನೆ 'ಒಂದೆಡೆ' ಸಂಸ್ಥಾಪಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಡಾ. ಅಕೈ ಪದ್ಮಶಾಲಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪದ್ಮಶಾಲಿ ಪಕ್ಷಕ್ಕೆ ಸೇರ್ಪಡೆಯಾದರು. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸಮಾಲೋಚಿಸುತ್ತಿದ್ದ ಅವರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು.

ಮಾರಂಭ ಉದ್ದೇಶಿಸಿ ಡಿಕೆ ಶಿವಕುಮಾರ್‌ ಮಾತನಾಡಿ, ಇಂದು ಮಹಿಳಾ ಸಮಾವೇಶ ಕೂಡ ನಡೆಸಿದ್ದಾರೆ. ಈ ಮಹಿಳಾ ಕಾರ್ಯಕ್ರಮವನ್ನು ಬಹಳ ಹಿಂದೆ ಮಾಡಬೇಕು ಅಂದುಕೊಂಡಿದ್ದೆ. ಹಲವಾರು ಕಾರಣಗಳಿಂದ ಆಗಿರಲಿಲ್ಲ. ಇಂದು ಶುಭ ಗಳಿಗೆ, ಶುಭ ಮುಹೂರ್ತ ಅಕೈ ಪದ್ಮಶಾಲಿ ಅವರು ಪಕ್ಷ ಸೇರಿದ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮಹಿಳೆಯರು ಗಂಡಸಿನ ಸರಿ ಸಮಾನವಾಗಿ ಹೋರಾಟ ಮಾಡಬೇಕು. ಅಕೈ ಪದ್ಮಶಾಲಿ ರಾಜ್ಯ ಕಾಂಗ್ರೆಸ್​ನ ಆಸ್ತಿ ಅಲ್ಲ, ದೇಶದ ಆಸ್ತಿ ಎಂದಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ನಿನ್ನೆ, ನನಗೆ ಮತ್ತು ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿದ್ರು. ಮೂರು ದಿನಗಳಿಗೆ ಅಧಿವೇಶನ ಮೊಟಕುಗೊಳಿಸ್ತೀವಿ ಅಂತ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅಧಿವೇಶನವನ್ನು ಬೇಗ ಮುಗಿಸಿ ಅಂತ ಸೂಚಿಸಿದ್ದಾರಂತೆ, ಕೊರೊನಾ ಆರ್ಭಟ ಹಿನ್ನೆಲೆ ಸದನವನ್ನು ಮೂರು ದಿನಕ್ಕೆ ಮೊಟಕು ಮಾಡ್ತಿದ್ದೇವೆ ಎಂದು. ಸಹಕಾರ ಕೊಡಬೇಕು ಅಂತ ಕೇಳಿದ್ರು. ಪ್ರಜಾಪ್ರಭುತ್ವ ಮುಗಿಸಲು ಬಿಜೆಪಿ ಹೊರಟಿದೆ. ರಾಜ್ಯದಲ್ಲಿ ಬರ, ನೆರೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇಂದ್ರ ಪರಿಹಾರ ಕೊಡ್ತಿಲ್ಲ ಇದೆಲ್ಲ ಚರ್ಚೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ಕೊಟ್ಟಿದ್ದಾರಂತೆ. ಇದನ್ನು ನಾವು ಒಪ್ಪಲ್ಲ ಎಂದು ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top