ತಂತ್ರಜ್ಞಾನ
ದೇಶದಲ್ಲಿ ಮತ್ತೊಮ್ಮೆ 50 ಸಾವಿರ ಗಡಿ ದಾಟಿದ ಚಿನ್ನದ ದರ :ಯಾವ ನಗರದಲ್ಲಿ ಎಷ್ಟು ಬೆಲೆ..!?
ನವದೆಹಲಿ : ಕಳೆದ ಕೆಲ ದಿನಗಳ ಹಿಂದೆ ನಿರಂತರವಾಗಿ ಕುಸಿತ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ನಾಗಾಲೋಟ ಕಂಡು ಬಂದಿದ್ದು, ಮತ್ತೊಮ್ಮೆ 50 ಸಾವಿರ ಗಡಿ ದಾಟಿದೆ. ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ 50,620 ರೂ. ಆಗಿದ್ದು, 22 ಕ್ಯಾರೆಟ್ ಬಂಗಾರದ ಬೆಲೆ 46,400 ರೂ ಆಗಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44 ಸಾವಿರ ರೂ ಇತ್ತು.
ಹೈದರಾಬಾದ್ನಲ್ಲಿ 22 ಕ್ಯಾರೆಟ್ ಗೋಲ್ಡ್ ಬೆಲೆ 44,250 ರೂ ಆಗಿದ್ದು, ಮುಂಬೈನಲ್ಲಿ 45,070 ರೂ ಇದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ 44,250 ರೂ ಇದ್ದು, 24 ಕ್ಯಾರೆಟ್ ಬಂಗಾರ 48,270 ರೂ ಆಗಿದೆ. ಕೊರೊನಾ ಮಹಾಮಾರಿ ಕಾರಣ ಕಳೆದ ವರ್ಷ ಬಂಗಾರದ ಬೆಲೆ ಗಗನಕ್ಕೇರಿತ್ತು. ಇದಾದ ಬಳಿಕ ದಿಢೀರ್ ಕುಸಿತ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೊಮ್ಮೆ ಏರಿಕೆ ಕಂಡು ಬರುತ್ತಿರುವುದು ಆಭರಣ ಪ್ರೀಯರಲ್ಲಿ ಆತಂಕ ಮೂಡಿಸಿದೆ.
Share
Continue Reading
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com