Wednesday, 02 Dec, 12.18 pm All Indian News 24x7

ರಾಷ್ಟೀಯ
ದೇಶದಲ್ಲಿ ಒಂದೇ ದಿನ 501 ಮಂದಿ ಕೊರೋನಾಗೆ ಬಲಿ..!ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?

ನವೆದೆಹಲಿ : ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 36,604 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 94,99,414 ಕ್ಕೆ ಏರಿದೆ. 501 ಜನ ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,38,122 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 43,062 ಜನ ಕೋವಿಡ್​-19 ನಿಂದ ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 89,32,647 ಕ್ಕೆ ಏರಿದೆ.

4,28,644 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ. ನಿನ್ನೆ 10,96,651 ಮಾದರಿಗಳನ್ನು ಪರೀಕ್ಷಿಸಿದ್ದು, ಡಿಸೆಂಬರ್ 1 ರವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳು 14,24,45,949 ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್​) ತಿಳಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top