Friday, 07 Aug, 7.00 am All Indian News 24x7

ಚಲನಚಿತ್ರ
ಧೈರ್ಯ ಮಾಡಿ ತಾನೇ ಕೂದಲು ಕಟ್ ಮಾಡಿಕೊಂಡ ರಾಕೆಟ್ ಬೆಡಗಿ ಐಶಾನಿ ಶೆಟ್ಟಿ

ವಾಸ್ತು ಪ್ರಕಾರ ,ರಾಕೆಟ್ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಮಿಗಳ ಮನಸ್ಸಿಗೆ ಹತ್ತಿರವಾಗಿದ್ದ ರಂಗಭೂಮಿ ಕಲಾವಿದೆ ಐಶಾನಿ ಶೆಟ್ಟಿ ಮನೆಯಲ್ಲಿಯೇ ಮಾಡಿಕೊಂಡ ಹೇರ್‌ಕಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ನನ್ನ ಕೂದಲನ್ನು ನಾನೇ ಕಟ್ ಮಾಡಿಕೊಳ್ಳುವುದಕ್ಕೆ ತುಂಬಾ ಧೈರ್ಯ ಬೇಕಾಗಿತ್ತು .ಈ ನ್ಯೂಲುಕ್ ನನಗೆ ತುಂಬಾ ಇಷ್ಟವಾಯ್ತು' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ಅಭಿಮಾನಿಗಳಲ್ಲಿ ಕೆಲವರು ಐಶಾನಿ ಟ್ರೆಂಡಿ ಹೇರ್ ಕಟ್ ಬಗ್ಗೆ ಹೊಗಳಿದರೆ ಇನ್ನು ಕೆಲವರು ಯಾಕೆ ಸಣ್ಣಗಾಗಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಸೂರ್ಯ-ಚಂದ್ರರು ಕಾತರಿಸಿವೇ,ತಮ್ಮ ಸೌಂದರ್ಯ ನೋಡಲು, ಕೋಗಿಲೆ ನಾಚುತ್ತಿದೆ ತಮ್ಮ ಮಧುರ ಧ್ವನಿ ಕೇಳಿ, ಹುಡುಕಿ ಸಾಕಾಗಿದೆ ಸಂಗೀತ ತಮ್ಮ ಧ್ವನಿಯಲ್ಲಿ ಇರುವ ನಾದ ಯಾವ ವಾದ್ಯದ್ದು? ಸಾವು ಗೆಲ್ಲಲು ಕರೋನಾ ರೋಗಿಗಳಿಗೆ ತಮ್ಮ ಧ್ವನಿ ಒಂದಿದ್ದರೇ ಸಾಕು. # My 1st crush' .ಹೀಗೆ ಐಶಾನಿ ಶೆಟ್ಟಿ ಅಪ್ಪಟ್ಟ ಅಭಿಮಾನಿ ಪ್ರವೀಣ್‌ ಮನಸಕಟ್ಟಿ ಕಾಮೆಂಟ್‌ ಬಾಕ್ಸ್‌ನಲ್ಲಿ ಕವಿತೆಯನ್ನು ಬರೆದಿದ್ದಾರೆ.

ಇದಕ್ಕೆ ಐಶಾನಿ 'ಥ್ಯಾಂಕ್ಸ್' ಎಂದು ಮರು ಕಾಮೆಂಟ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಬೇಡಿಕೆಯ ನಟಿ ಐಶಾನಿ ಶೆಟ್ಟಿ ಸದ್ಯಕ್ಕೆ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಹಾಗೂ 'ಹೊಂದಿಸಿ ಬರೆಯಿರಿ' ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top