Wednesday, 16 Sep, 12.47 pm All Indian News 24x7

ರಾಷ್ಟೀಯ
ಏರೋಸಾಲ್ ಮೂಲಕ ಕೊರೊನಾ ವೈರಸ್ ಹರಡುತ್ತದೆ: ಕೇಂದ್ರ ಆರೋಗ್ಯ ಇಲಾಖೆ

ನವದೆಹಲಿ : ಏರೋಸಾಲ್ ವೈದ್ಯಕೀಯ ವಿಧಾನದ ವೇಳೆ ಉತ್ಪಾದನೆಯಾಗುವ ಸಣ್ಣ ಹನಿಗಳ ಮೂಲಕ ಕೋವಿಡ್ -19 ವೈರಸ್​ ಹರಡಬಹುದು (ವಾಯುಗಾಮಿ ಪ್ರಸರಣ) ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಗಾಳಿಯೊಂದಿಗೆ ಸಣ್ಣ ಕಣಗಳ ಮೂಲಕ ರೋಗ ಹರಡುವುದು ವಾಯುಗಾಮಿ ಪ್ರಸರಣ ಎಂದು ಕರೆಯುತ್ತಾರೆ. ಕೊರೊನಾ ಸೋಂಕು ಕೂಡ ಏರೋಸಾಲ್ ಮೂಲಕ ಹರಡಬಹುದು ಎಂದು ಸಂಸತ್​ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ.

ದೇಶದಲ್ಲಿರುವ ಕೋವಿಡ್​ ಕೇಸ್​ಗಳ ಪೈಕಿ 10 ರಾಜ್ಯಗಳಲ್ಲಿ ಶೇ.77 ರಷ್ಟು ಪ್ರಕರಣಗಳು ಸಕ್ರಿಯವಾಗಿವೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಛ್ತತೀಸ್​ಗಢ, ತೆಲಂಗಾಣ, ಒಡಿಶಾ, ಅಸ್ಸೋಂ ಮತ್ತು ಕೇರಳ ರಾಜ್ಯಗಳು ಈ ಪಟ್ಟಿಯಲ್ಲಿವೆ. ಸುರಕ್ಷಿತ ಮತ್ತು ಪರಿಣಾಮಕಾರಿ ಕೋವಿಡ್ ಲಸಿಕೆಯನ್ನು ತ್ವರಿತವಾಗಿ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಚೌಬೆ ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top