Thursday, 03 Dec, 7.00 am All Indian News 24x7

ಬೆಂಗಳೂರು ನಗರ
ಕಿಲ್ಲರ್ ಕೊರೊನಾ ವೈರಸ್ ನಿಂದ ಪಾರಾಗಲು ಇಲ್ಲಿವೆ ಸರಳೋಪಾಯಗಳು..!

ವಿಶ್ವದಲ್ಲಿ ಆತಂಕ ಸೃಷ್ಟಿಸಿ ಸಾವು-ನೋವುಗಳಿಗೆ ಕಾರಣವಾಗಿರುವ ಚೀನಾದ ಮಾರಕ ಕೊರೋನಾ ವೈರಾಣು ಸೋಂಕಿನಿಂದ ಸಾವು-ನೋವು ಸಂಭವಿಸಿ ಭಾರತದಲ್ಲೂ ಶಂಕಿತ ಪ್ರಕರಣಗಳು ಪತ್ತೆಯಾಗಿರುವುದು ಭಯ-ಭೀತಿಗೆ ಕಾರಣವಾಗಿದೆ. ಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರಲ್ಲಿಗೆ ಧಾವಿಸಿ ಸಲಹೆ ಪಡೆಯುವುದು ಒಳಿತು.

ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ತುರ್ತು ಪ್ರಕಟಣೆಯೊಂದನು ಹೊರಡಿಸಿ ಕಿಲ್ಲರ್ ಕರೋನಾ ವೈರಾಣು ಸೋಂಕು ಬರದಂತೆ ತಡೆಯಲು ಕೆಲವು ಸರಳ ಮಾರ್ಗೋಪಾಯಗಳನ್ನು ತಿಳಿಸಿದೆ. ಗಂಟಲು ಒಣಗುವುದನ್ನು ತಡೆಗಟ್ಟುವುದು, ಈ ವೈರಾಣು ಹತ್ತಿರ ಬರದಂತೆ ಮಾಡುವುದು ಸರಳ ವಿಧಾನವಾಗಿದೆ. ವ್ಯಕ್ತಿಯ ಗಂಟಲಿನ ತೆಳುವಾದ ಪದರ ಒಣಗಿದ್ದಲ್ಲಿ ಈ ವೈರಾಣು 10 ನಿಮಿಷದಲ್ಲೇ ದೇಹವನ್ನು ಪ್ರವೇಶಿಸಿ ತನ್ನ ದುಷ್ಪ್ರಭಾವ ಬೀರುತ್ತದೆ. ಹೀಗಾಗಿ ಗಂಟಲು ಒಣಗಲು ಬಿಡಬಾರದು.

ಗಂಟಲು ಒಣಗುವುದಕ್ಕೂ ಮುನ್ನವೇ ದೊಡ್ಡವರು 50ರಿಂದ 80 ಸಿಸಿ ಬಿಸಿ ನೀರು ಮತ್ತು ಮಕ್ಕಳು 30ರಿಂದ 50 ಸಿಸಿ ಬೆಚ್ಚನೆಯ ನೀರು ಸೇವಿಸಬೇಕು. ಗಂಟಲು ಪಸೆ ಆರಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಗಂಟಲು ಒಣಗುವುದನ್ನು ತಪ್ಪಿಸಲು ಒಟ್ಟಿಗೆ ಸಾಕಷ್ಟು ನೀರು ಕುಡಿಯುವುದರಿಂದ ಏನು ಪ್ರಯೋಜನವಿಲ್ಲ ಎಂದು ಸಲಹೆ ಮಾಡಲಾಗಿದೆ.

ನೀವು ಎಲ್ಲೇ ಹೋಗಲಿ ಕೈಯಲ್ಲಿ ಒಂದು ಬಾಟಲ್ ನೀರು ಇರಲಿ. ಮಾ.30ರವರೆಗೂ ಜನರು ಸಾಧ್ಯವಾದಷ್ಟು ಜನಸಂದಣಿ ಪ್ರದೇಶಗಳಿಂದ ದೂರ ಇರುವುದು ಸೂಕ್ತ. ಬಸ್, ರೈಲು ಮತ್ತಿತರ ಸಾರ್ವಜನಿಕ ವಲಯಗಳಲ್ಲಿ ಹೋಗಾಬೇಕಾದರೆ ಮುಖಕ್ಕೆ ಮಾಸ್ಕ್ ಧರಿಸಬೇಕು, ಸಾಧ್ಯವಾದಷ್ಟು ಉರಿದ, ಕರಿದ ಮತ್ತು ಮಸಾಲೆ ಪದಾರ್ಥಗಳಿಂದ ದೂರ ಇರಬೇಕು. ವಿಟಮಿನ್ ಸಿ ಜೀವಸತ್ವ ಸಮೃದ್ಧವಾಗಿರುವ ಆಹಾರಗಳನ್ನು ಯಥೇಚ್ಛವಾಗಿ ಸೇವಿಸಬೇಕು.

ಕೊರೊನಾ ವೈರಸ್ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ

ಸಂಶಯಾಸ್ಪದ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ಮುಂಜಾಗ್ರತಾ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಲು ಸೂಚಿಸಿದೆ.
#ಐಎಲ್‍ಐ ಸರ್ವೇಕ್ಷಣೆಯನ್ನು ಬಲಗೊಳಿಸುವುದು.
#ಸಂಶಯಾಸ್ಪದ ಪ್ರಕರಣಗಳು ವರದಿಯಾದಲ್ಲಿ ಅಂತಹ ಪ್ರಕರಣಗಳ ಟ್ರಾವೆಲ್ ಹಿಸ್ಟರಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವುದು.
#ಪಿಪಿಇ (ಗ್ಲೌಸ್, ಮಾಸ್ಕ್ ಮುಂತಾದವು)ಗಳ ದಾಸ್ತಾನು ಇಟ್ಟುಕೊಳ್ಳುವುದು.
#ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್‍ನಿಂದ ಮೂಗು ಮುಚ್ಚಿಕೊಳ್ಳುವುದು ಮತ್ತು ಅದನ್ನು ಸಮರ್ಪಕವಾಗಿ ವಿಲೇವಾರಿ ಅಥವಾ ನಾಶ ಮಾಡುವುದು.
#ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯುವುದು.
#ವೈಯಕ್ತಿಕ ಸ್ವಚ್ಛತೆ ಪಾಲಿಸಿ, ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸುವುದು.
#ಸೋಂಕಿತರ ಅತಿ ಸಮೀಪ ಹೋಗಲೇಬಾರದು.
#ಹಸ್ತಲಾಘವ, ತಬ್ಬಿಕೊಳ್ಳುವುದು ಅಥವಾ ಚುಂಬನ ಮಾಡಬಾರದು.
#ಕಣ್ಣು, ಮೂಗು, ಬಾಯಿಯನ್ನು ಸ್ಪರ್ಶ ಮಾಡುವ ಮೊದಲು ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
#ಎನ್‍ಐವಿ, ಪುಣೆ ಇಲ್ಲಿ ಈ ರೋಗದ ಪರೀಕ್ಷೆ ಮಾಡಲಾಗುವುದು ಹಾಗೂ ಸಂಶಯಾಸ್ಪದ ರಕ್ತ ಮತ್ತು ಗಂಟಲು ದ್ರವ ಮಾದರಿಯನ್ನು ಜಿಲ್ಲಾ ಸರ್ವೇಕ್ಷಣಾ ಘಟಕದ ಮುಖಾಂತರ ಪರೀಕ್ಷೆಗೆ ಕಳುಹಿಸಲಾಗುವುದು.
#ಶಂಕಿತ ಕೊರೊನಾ ವೈರಸ್ ಸೋಂಕಿತ ಪ್ರಕರಣ ಒಳರೋಗಿಯಾಗಿ ದಾಖಲು ಮಾಡುವ ಸಂದರ್ಭದಲ್ಲಿ ಇಸಾಲೇಷನ್ ವಾರ್ಡ್ ಕಾಯ್ದಿರಿಸಬೇಕು.
#ಕೊರೊನಾ ವೈರಸ್ ಸೋಂಕಿಗೆ ಯಾವುದೇ ಪರಿಣಾಮಕಾರಿಯಾದ ಔಷಧಿ/ಲಸಿಕೆ ಲಭ್ಯವಿಲ್ಲ. ಯಾವುದೇ ಸಂಶಯಾಸ್ಪದ ಪ್ರಕರಣಗಳು ವರದಿಯಾದಲ್ಲಿ ತಕ್ಷಣ ಜಿಲ್ಲಾ ಸರ್ವೇಕ್ಷಣಾ ಘಟಕ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

# ರೋಗ ಲಕ್ಷಣಗಳು
ಕೊರೊನಾ ವೈರಾಣುವಿನಿಂದ ಉಂಟಾಗುವ ರೋಗಲಕ್ಷಣಗಳು ಈ ಕೆಳಕಂಡಂತಿವೆ.
#ಪುನರಾವರ್ತಿತ ವಿಪರೀತ ಜ್ವರ
# ಜ್ವರ ಕಾಣಿಸಿಕೊಂಡ ನಂತರ ಧೀರ್ಘ ಕಾಲ ಕಾಡುವ ಕೆಮ್ಮು
#ಮಕ್ಕಳು ಈ ಸೋಂಕಿಗೆ ಬೇಗ ಒಳಗಾಗುತ್ತಾರೆ
#ದೊಡ್ಡವರಲ್ಲಿ ಸುಸ್ತು, ಆಯಾಸ, ತಲೆನೋವು ಕಂಡುಬರುತ್ತದೆ.
#ಯಾವುದೇ ರೋಗ ಪ್ರತಿರೋಧಕ ಔಷಧಿ ಮಾತ್ರೆಗಳಿಗೆ ಸ್ಪಂದಿಸದಿರುವುದು
#ಸಾರ್ಸ್(ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಡ್ರೋಮ್) ರೋಗದ ರೀತಿ ಕೊರೋನ ವೈರಾಣು ಸೋಂಕಿನಲ್ಲೂ ಉಸಿರಾಟ ತೀವ್ರ ಸಮಸ್ಯೆ ಎದುರಾಗುತ್ತದೆ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top