Thursday, 29 Oct, 6.00 am All Indian News 24x7

ಬೆಂಗಳೂರು ನಗರ
ಮಾಸ್ಕ್ ಧರಿಸಲು ತಿಳಿಸಿದ್ದಕ್ಕೆ ಕ್ರೌರ್ಯತೆ :ಸೆಕ್ಯುರಿಟಿ ಗಾರ್ಡ್ಗೆ 27 ಬಾರಿ ಇರಿದ ಅಕ್ಕ-ತಂಗಿ.!

ಅಮೆರಿಕ : ಸ್ಟೋರ್ ಸೆಕ್ಯುರಿಟಿ ಗಾರ್ಡ್​ಗೆ ಅಕ್ಕ-ತಂಗಿಯರಿಬ್ಬರು ಸೇರಿ 27 ಬಾರಿ ಚಾಕುವಿನಿಂದ ಇರಿದಿರುವ ಘಟನೆ ವೆಸ್ಟ್ ಸೈಡ್ ಶಿಕಾಗೋದಲ್ಲಿ ನಡೆದಿದೆ ಕಳೆದ ಭಾನುವಾರದಂದು ಸ್ಟೋರ್ ಭೇಟಿ ನೀಡಿದ್ದ ​ಇಬ್ಬರು ಸಹೋದರಿಯರಿಗೆ ಸೆಕ್ಯುರಿಟಿ ಗಾರ್ಡ್ ಫೇಸ್ ಮಾಸ್ಕ್ ಧರಿಸಲು ಮತ್ತು ಹ್ಯಾಂಡ್ ಸ್ಯಾನಿಟೈಜರ್ ಬಳಸುವಂತೆ ಕೇಳಿಕೊಂಡಿದ್ದಾರೆ.

ಈ ವೇಳೆ ಸೆಕ್ಯುರಿಟಿ ಗಾರ್ಡ್​ ಮತ್ತು ಸಹೋದರಿಯರಿಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸ್​ ಅಧಿಕಾರಿ ಕ್ಯಾರಿ ಜೇಮ್ಸ್​ ತಿಳಿಸಿದ್ದಾರೆ. ವಾಗ್ವಾದ ವಿಕೋಪಕ್ಕೆ ತಿರುಗಿದ್ದು, 21 ವರ್ಷದ ಜೆಸ್ಸಿಕಾ ಹಿಲ್ ಮತ್ತು 18 ವರ್ಷದ ಜಯಲಾ ಹಿಲ್ ಎಂಬುವರು 32 ವರ್ಷದ ಸೆಕ್ಯುರಿಟಿಯ ಎದೆ, ಬೆನ್ನು ಮತ್ತು ಕೈ ಮೇಲೆ 27 ಬಾರಿ ಚಾಕುವಿನಿಂದ ಇರಿದಿದ್ದಾರೆ.

ಸೆಕ್ಯುರಿಟಿ ಗಾರ್ಡ್​ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. ದಾಳಿ ನಡೆದ ಸ್ಥಳದಲ್ಲಿ ಮಹಿಳೆಯರನ್ನು ಬಂಧಿಸಲಾಗಿದ್ದು, ಇಬ್ಬರಿಗೂ ಹತ್ತಿರದ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ. ಆರೋಪಿಗಳನ್ನು ಮಹಿಳಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸಹೋದರಿಯರಿಬ್ಬರು ಬೈಪೋಲಾರ್​ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಜೇಮ್ಸ್ ಹೇಳಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top