Thursday, 29 Oct, 12.19 pm All Indian News 24x7

ಬೆಂಗಳೂರು ನಗರ
ಮುನಿರತ್ನ ಪರ ಅಖಾಡಕ್ಕಿಳಿಯಲಿದ್ದಾರೆ D ಬಾಸ್

ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಳಿಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಾಳೆ ಇಡೀ ದಿನ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅಭ್ಯರ್ಥಿ ಮುನಿರತ್ನ, ದರ್ಶನ್ ಪ್ರಚಾರಕ್ಕೆ ಆಗಮಿಸುತ್ತಿರುವ ಮಾಹಿತಿಯನ್ನು ನೀಡಿದ್ದಾರೆ. ಇಂದೇ ಪ್ರಚಾರಕ್ಕೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ನಾಳೆಗೆ ಮುಂದೂಡಿಕೆಯಾಗಿದೆ. ಈ ಸಂಬಂಧ ದರ್ಶನ್ ಜೊತೆ ಮಾತನಾಡಿದ್ದೇನೆ. ನಾಳೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಆರ್.ಆರ್. ನಗರ ಕ್ಷೇತ್ರದ ಎಲ್ಲಾ 9 ವಾರ್ಡ್​ಗಳಲ್ಲಿಯೂ ದರ್ಶನ್ ಮತ ಬೇಟೆ ನಡೆಸಲಿದ್ದಾರೆ ಎಂದರು.

ನಿನ್ನೆ ನಟಿ ಖುಷ್ಬೂ ಪ್ರಚಾರ ನಡೆಸಿದ್ದಾರೆ. ನಾಳೆ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಶೃತಿ, ತಾರಾ ಪ್ರಚಾರಕ್ಕೆ ಬರುತ್ತಾರೆ. ನಟ ಯಶ್ ಜೊತೆ ಮಾತನಾಡಿಲ್ಲ, ಮುಂದೆ ಯಾರೆಲ್ಲಾ ಬರಲಿದ್ದಾರೆ ಎನ್ನುವ ಮಾಹಿತಿಯನ್ನು ಮತ್ತೊಮ್ಮೆ ನೀಡುವುದಾಗಿ ಮುನಿರತ್ನ ತಿಳಿಸಿದರು.

ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ನಟರಾದ ದರ್ಶನ್ ಹಾಗು ಯಶ್ ಚುನಾವಣಾ ಪ್ರಚಾರ ನಡೆಸಿದ್ದರು. ಆ ಯಶಸ್ವಿ ಜೋಡೆತ್ತುಗಳನ್ನು ಪ್ರಚಾರಕ್ಕೆ ಕರೆತರುವ ಮಾಸ್ಟರ್ ಪ್ಲಾನ್ ಮಾಡಿರುವ ಮುನಿರತ್ನ ಮೊದಲ ಹಂತವಾಗಿ ನಟ ದರ್ಶನ್ ಅವರನ್ನು ಪ್ರಚಾರಕ್ಕೆ ಕರೆಸಿಕೊಳ್ಳುತ್ತಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top