Dailyhunt
ನಿಮ್ಮ ತಲೆಯಲ್ಲಿ ಹೇನು ಜಾಸ್ತಿ ಆಗಿದ್ಯಾ..?ಇಲ್ಲಿದೆ ನೋಡಿ ಮನೆಮದ್ದು

ನಿಮ್ಮ ತಲೆಯಲ್ಲಿ ಹೇನು ಜಾಸ್ತಿ ಆಗಿದ್ಯಾ..?ಇಲ್ಲಿದೆ ನೋಡಿ ಮನೆಮದ್ದು

AIN Kannada 4 years ago

ಬೆಂಗಳೂರು: ಹೆಚ್ಚಿನವರಿಗೆ ತಲೆಯಲ್ಲಿ ಹೇನಿನ ಸಮಸ್ಯೆ ಇರುತ್ತದೆ. ಇದರಿಂದ ಯಾವಾಗಲೂ ತಲೆ ತುರಿಸುತ್ತಲೇ ಇರುತ್ತದೆ. ಹೊರಗಡೆ ಹೋದಾಗ ತಲೆ ತುರಿಸಿಕೊಳ್ಳಲು ಮುಜುಗರವಾಗುತ್ತದೆ. ಹಾಗೆ ತಲೆಯಲ್ಲಿ ಹೇನುಗಳು ಕಚ್ಚಿ ಹುಣ್ಣುಗಳಾಗುತ್ತದೆ. ಈ ಹೇನುಗಳನ್ನು ಮನೆಮದ್ದಿನಿಂದ ನಿವಾರಿಸಬಹುದು.

ಮೊದಲನೇಯದಾಗಿ ಕಹಿಬೇವು ಸೊಪ್ಪಿನ ಪೇಸ್ಟ್ ಅಥವಾ ಅದನ್ನು ಒಣಗಿಸಿ ಮಾಡಿದ ಪುಡಿಯನ್ನು 1 ಕಪ್ ತೆಗೆದುಕೊಂಡು ಅದಕ್ಕೆ 1 ಕಪ್ ಮೆಂತೆಕಾಳಿನ ಪೇಸ್ಟ್ (ಮೆಂತೆಕಾಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ರುಬ್ಬಿದ ಪೇಸ್ಟ್) ಸೇರಿಸಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ ಒಂದು ಗಂಟೆ ಬಿಟ್ಟು ತೊಳೆಯಿರಿ. ಹೀಗೆ ಮಾಡಿದ್ರೆ ಹೇನು ಮಾಯಾವಾಗುತ್ತದೆ.

ಎರಡನೇಯದಾಗಿ ಕಹಿಬೇವು ಸೊಪ್ಪಿನ ಪುಡಿ 1 ಕಪ್ ತೆಗೆದುಕೊಂಡು ಅದಕ್ಕೆ 1ಕಪ್ ಕೊಬ್ಬರಿಎಣ್ಣೆ ಮಿಕ್ಸ್ ಮಾಡಿ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ 5-10 ನಿಮಿಷ ಕುದಿಸಿ.

ನಂತರ ತಣ್ಣಗಾದ ಮೇಲೆ ತಲೆಗೆ 5 ನಿಮಿಷ ಮಸಾಜ್ ಮಾಡಿ ನಂತರ ಒಂದು ಗಂಟೆ ಬಿಟ್ಟು ತೊಳೆಯಿರಿ.(ಈ ಮಿಶ್ರಣವನ್ನು ಮಾಡಿ ಶೇಖರಿಸಿ ಇಟ್ಟುಕೊಳ್ಳಬಹುದು).

Share

Continue Reading

Dailyhunt
Disclaimer: This content has not been generated, created or edited by Dailyhunt. Publisher: AIN Live News