Monday, 21 Sep, 10.56 am All Indian News 24x7

ಬೆಂಗಳೂರು ನಗರ
ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಶೀಲನಾ ಸಮಿತಿ ರಚಿಸಿದ ಡಿಕೆಶಿ ;ವಾರದೊಳಗೆ ವರದಿ ನೀಡಲು ಸೂಚನೆ

ಬೆಂಗಳೂರು : ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಎಲ್ಲಾ ಹಂತದ ವಿದ್ಯಾರ್ಥಿಗಳ ಸಿಲಬಸ್‌ನಲ್ಲಿ ಸಾಕಷ್ಟು ಪೂರ್ವಾಗ್ರಹ ಪೀಡಿತ ದೋಷಗಳು ಆಗಿರುವುದು ಕಂಡು ಬಂದಿದೆ. ಇವುಗಳನ್ನು ಅಧ್ಯಯನ ಮಾಡಿ ಜನ ಜಾಗೃತಿ ಮೂಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಶೀಲನಾ ಸಮಿತಿಯನ್ನು ರಚನೆ ಮಾಡಲಾಗಿದೆ.

ಈ ಸಮಿತಿಯು ಶೈಕ್ಷಣಿಕ ಪಠ್ಯಕ್ರಮದಲ್ಲಿ ಆಗಿರುವ ಇತಿಹಾಸ ವಿರೋಧಿ ಮತ್ತು ಸಮಾಜ ವಿರೋಧಿ ಲೋಪದೋಷಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ಸಲ್ಲಿಸಲು ವರದಿ ನೀಡಬೇಕು. ಸದರಿ ಸಮಿತಿ ನಾಲ್ಕು ದಿನಗಳೊಳಗೆ ಪ್ರಥಮ ಸಭೆ ಸೇರಿ ಒಂದು ವಾರದೊಳಗಾಗಿ ಅಂತಿಮ ವರದಿಯನ್ನು ಕೆಪಿಸಿಸಿ ಸಲ್ಲಿಸಬೇಕು ಎಂದು ಸಮಿತಿ ರಚಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪ್ರೊ. ಕೆ.ಇ ರಾಧಾಕೃಷ್ಣ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಾಹಿತಿ-ಚಿಂತಕ ಹಾಗೂ ಸಂಸದ ಡಾ.ಎಲ್. ಹನುಮಂತಯ್ಯ, ನಿವೃತ್ತ ಐಪಿಎಸ್ ಅಧಿಕಾರಿ ಜಮೀರ್ ಪಾಷಾ ಸಂಚಾಲಕರಾಗಿದ್ದಾರೆ. ಸಂಚಾಲಕರಾಗಿ ಮಾಜಿ ಸಂಸದ ಪ್ರೊ.ರಾಜೀವ್ ಗೌಡ, ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ತನ್ವೀರ್ ಸೇಠ್, ಕಿಮ್ಮನೆ ರತ್ನಾಕರ್, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಶರಣಪ್ಪ ಮಟ್ಟೂರು,

ಡೇವಿಡ್ ಸಿಮಿಯೋನ್, ಪ್ರೊ.ಬಸವರಾಜಯ್ಯ, ಪೊನ್ನಣ್ಣ, ಮಂಜುನಾಥ್ ಭಂಡಾರಿ, ಎಸ್.ಎ. ಅಹಮದ್, ಮಂಜುನಾಥ್, ಹೆಚ್ ಎಸ್ ನಿರಂಜನಾರಾಧ್ಯ ನಿಕೇತ್ ರಾಜ್, ಮಂಜುಳಾ ಮಾನಸ, ರಾಜಶ್ರೀ, ಪ್ರೊ. ಬಾಬು ಮ್ಯಾಥ್ಯೂ, ಕವಿತಾ ಗೌಡ, ಮನ್ಸೂರ್ ಅಲಿ ಖಾನ್, ರೋಶನಿ ಆಲಿವರ್ ಅಬ್ದುಲ್ ಮನ್ನನ್ ಸೇಠ್, ಭವ್ಯ ನರಸಿಂಹಮೂರ್ತಿ, ಕವಿತಾ ಜೋಡಿದಾರ್ ನೇಮಕಗೊಂಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top