Wednesday, 06 Jun, 12.28 pm All Indian News 24x7

ಜಿಲ್ಲೆ
ಸಿಎಂ ಸಂಪುಟದಲ್ಲಿ ಸಚಿವರಾದ ಶಾಸಕ ಶಿವಾನಂದ ಪಾಟೀಲ!

ಅವರು ಜನತಾ ದಳದಿಂದ ರಾಜಕೀಯ ಆರಂಭಿಸಿದ್ದರು. ನಾಲ್ಕು ಬಾರಿ ಶಾಸಕರಾಗಿದ್ದರೂ ಸಚಿವರಾಗುವ ಯೋಗ ಕೂಡಿ ಬಂದಿರಲಿಲ್ಲ. ಈಗ 5ನೇ ಬಾರಿಗೆ ಶಾಸಕರಾಗಿದ್ದೆ ತಡ, ಸಚಿವರಾಗುವ ಶುಭ ಗಳಿಗೆ ಕೂಡಿ ಬಂದಿದೆ. ಅಂದಹಾಗೆ, ಅವರು ವಿಜಯಪುರ ಜಿಲ್ಲೆಯ ಚತುರ ರಾಜಕಾರಣಿ ಎಂದೇ ಹೆಸರಾಗಿರುವ ಮತ್ತು ಪಕ್ಷಕ್ಕಿಂತಲೂ ವೈಯಕ್ತಿಕ ವರ್ಚಸ್ಸಿನಿಂದಲೇ ರಾಜಕೀಯದಲ್ಲಿ ಸಾಕಷ್ಟು ಹೆಸರು ಮಾಡಿರುವ ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ.

ಬಸವಣ್ಣನ ತವರು ಬಸವನ ಬಾಗೇವಾಡಿಯಿಂದ 3ನೇ ಬಾರಿಗೆ ಶಾಸಕರಾಗಿರುವ ಶಿವಾನಂದ ಎಸ್. ಪಾಟೀಲ ಈಗ ಎಚ್. ಡಿ. ಕುಮಾರಸ್ವಾಮಿ ಸಿಎಂ ಸಂಪುಟದಲ್ಲಿ ಸಚಿವರಾಗುತ್ತಿದ್ದಾರೆ. ಕಳೆದ ಬಾರಿಯೇ ಶಾಸಕ ಶಿವಾನಂದ ಎಸ್. ಪಾಟೀಲ ಶಾಸಕರಾಗಬೇಕಿತ್ತಾದರೂ, ಲಿಂಗಾಯಿತ ಮತ್ತು ಪಂಚಮಸಾಲಿ ಲಿಂಗಾಯಿತ ಕೋಟಾದಡಿ ಧಾರವಾಡದ ವಿನಯ ಕುಲಕರ್ಣಿ ಅವರಿಗೆ ಅದೃಷ್ಟ ಒಲಿದು ಬಂದಿತ್ತು.
ಆದರೆ, ಈ ಬಾರಿ ಶಿವಾನಂದ ಪಾಟೀಲ ಅವರಿಗೆ ಸಚಿವರಾಗುವ ಯೋಗ ಕೊನೆಗೂ ಕೂಡಿ ಬಂದಿದೆ.

1992ರಲ್ಲಿ ವಿಜಯಪುರ ನಗರಸಭೆಯ ಅಧ್ಯಕ್ಷರಾಗಿದ್ದ ಶಿವಾನಂದ ಪಾಟೀಲ ನಂತರ 1993ರಲ್ಲಿ ನಡೆದ ತಿಕೋಟಾ ವಿಧಾನಸಭೆ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಜನತಾ ದಳದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಆದರೆ, ನಂತರ ನಡೆದ 1994 ರಲ್ಲಿ ತಿಕೋಟಾದಿಂದ ಜನತಾ ದಳದಿಂದ ಆಯ್ಕೆಯಾಗಿದ್ದರು. ನಂತರ 1999 ರಲ್ಲಿ ತಿಕೋಟಾದಿಂದ ಪಕ್ಷ ಬದಲಿಸಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದರು. ಅಷ್ಟೇ ಅಲ್ಲ, 2004ರ ಚುನಾವಣೆಯಲ್ಲಿ ಪಕ್ಷಾಂತರ ಅಷ್ಟೇ ಅಲ್ಲ, ಕ್ಷೇತ್ರಾಂತರವನ್ನೂ ಮಾಡಿ ಬಸವನ ತಿಕೋಟಾ ಮತಕ್ಷೇತ್ರ ಬಿಟ್ಟರು. ಅಲ್ಲದೇ, ಬಿಜೆಪಿಯನ್ನೂ ತೊರೆದು ಬಸವನ ಬಾಗೇವಾಡಿಯಿಂದ ಕಾಂಗ್ರೆಸ್​ನಿಂದ ಆಯ್ಕೆಯಾದರು.

ಆದರೆ, 2009ರಲ್ಲಿ ಬಸವನ ಬಾಗೇವಾಡಿಯಿಂದ ಕಾಂಗ್ರೆಸ್ಸಿನಂದ ಪುನರಾಯ್ಕೆ ಬಯಸಿ, ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಮ ಕೆ. ಬೆಳ್ಳುಬ್ಬಿ ವಿರುದ್ಧ ಸೋಲುಂಡರು.
ಆದರೆ, 2013ರಲ್ಲಿ ಬಸವನ ಬಾಗೇವಾಡಿಯಿಂದ ಕಾಂಗ್ರೆಸ್ ನಿಂದ ಮತ್ತೆ ಸ್ಪರ್ಧಿಸಿ ಆಯ್ಕೆಯಾದ ಶಿವಾನಂದ ಪಾಟೀಲ, 2018ರಲ್ಲಿ ಬಸವನ ಬಾಗೇವಾಡಿಯಿಂದ ಕಾಂಗ್ರೆಸ್​ನಿಂದ ಪುನರಾಯ್ಕೆಯಾಗಿ ಈಗ ಸಚಿವರಾಗುತ್ತಿದ್ದಾರೆ. ಜನತಾ ದಳದಿಂದ ರಾಜಕೀಯ ಆರಂಭಿಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗುತ್ತಿರುವುದು ಗಮನಾರ್ಹವಾಗಿದೆ.

Dailyhunt
Top