Monday, 23 Nov, 12.13 pm All Indian News 24x7

ರಾಷ್ಟೀಯ
ಉಗ್ರರ ಕಳ್ಳ ಮಾರ್ಗ :ಗಡಿರೇಖೆ ಬಳಿ ರಹಸ್ಯ ಸುರಂಗ ಪತ್ತೆ ಹಚ್ಚಿದ ಭಾರತೀಯ ಸೇನೆ

ಶ್ರೀನಗರ : ಇಲ್ಲಿನ ಸಾಂಬಾ ಗಡಿ ಭಾಗದಲ್ಲಿ 150 ಮೀಟರ್ ಉದ್ದದ ಸುರಂಗ ಮಾರ್ಗವನ್ನು ಬಿಎಸ್​​ಎಫ್ ಯೋಧರು ಭಾನುವಾರ ಪತ್ತೆ ಮಾಡಿದ್ದಾರೆ. ಇತ್ತೀಚಿಗೆ ಜೈಶ್​​​​​-ಎ-ಸಂಘಟನೆಗೆ ಸೇರಿದ್ದ ನಾಲ್ವರು ಯೋಧರನ್ನು ಸೇನೆ ಹೊಡೆದುರುಳಿಸಿತ್ತು. ಈ ಉಗ್ರರು ಇದೇ ಸುರಂಗ ಬಳಸಿ ಭಾರತದೊಳಗೆ ಪ್ರವೇಶಿಸಿದ್ದರು ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಈ ಸುರಂಗವು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗ್ರೋಟಾ ಬಳಿ ಇತ್ತೀಚಿಗೆ ನಡೆದ ಎನ್‌ಕೌಂಟರ್‌ನ ತನಿಖೆಯ ವೇಳೆ ಪತ್ತೆಯಾಗಿದೆ. ಗುರುವಾರ ಹೆದ್ದಾರಿಯಲ್ಲಿರುವ ಬಾನ್ ಟೋಲ್ ಪ್ಲಾಜಾದಲ್ಲಿ ತಪಾಸಣೆಗಾಗಿ ಟ್ರಕ್ ಅನ್ನು ನಿಲ್ಲಿಸಿದಾಗ ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರು ಗುಂಡಿನ ಚಕಮಕಿಯಲ್ಲಿ ಹತರಾಗಿದ್ದರು.

ಈ ಉಗ್ರರು ಸುರಂಗ ಬಳಸಿ ಭಾರತಕ್ಕೆ ಬಂದಿದ್ದರು ಎನ್ನಲಾಗ್ತಿದೆ. ಪಾಕಿಸ್ತಾನದ ಶಾಕಾರ್‌ಗಡದಲ್ಲಿರುವ ಜೈಶ್‌ ಕ್ಯಾಂಪ್‌ನಿಂದ ನದಿಯ ಮೂಲಕ ಸಾಂಬಾ ಗಡಿಯವರೆಗೆ 30ಕಿ.ಮೀ. ದೂರವನ್ನು ಉಗ್ರರು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದರು ಎಂದು ತಿಳಿದುಬಂದಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top