Dailyhunt
ಆಸ್ಪತ್ರೆಯಲ್ಲಿನ ಹೊರಾವರಣದಲ್ಲೇ ರೋಗಿಗೆ ಚಿಕಿತ್ಸೆ :ಬೀದಿಪಾಲಾಗುತ್ತಿದ್ದಾರಾ ರೋಗಿಗಳು..?

ಆಸ್ಪತ್ರೆಯಲ್ಲಿನ ಹೊರಾವರಣದಲ್ಲೇ ರೋಗಿಗೆ ಚಿಕಿತ್ಸೆ :ಬೀದಿಪಾಲಾಗುತ್ತಿದ್ದಾರಾ ರೋಗಿಗಳು..?

AIN Kannada 5 years ago

ರಾಜ್ ಕೋಟ್ ​​: ಕೊರೊನಾ ಭೀಕರತೆ ಎಲ್ಲರನ್ನೂ ಅಲುಗಾಡಿಸಿಬಿಟ್ಟಿದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ಜನರ ಬದಕು ಬೀದಿಪಾಲಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ರೋಗಿಗಳು ರಸ್ತೆ ಬದಿಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗುಜರಾತ್‌ನಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ.

ರೋಗಿಗಳಿಗೆ ಒಂದೆಡೆ ಬೆಡ್​ ಸಿಗುತ್ತಿಲ್ಲ. ಮತ್ತೊಂದೆಡೆ ಆಮ್ಲಜನಕ ಸಿಗುತ್ತಿಲ್ಲ. ಈ ಹಿನ್ನೆಲೆ ರೋಗಿಗಳು ಸಾವು ಬದುಕಿನ ಜೊತೆ ಬೀದಿ ಬದಿಯಲ್ಲಿ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್‌ಕೋಟ್​​​‌ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ.

ರಾಜ್‌ಕೋಟ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳ ಕೊರತೆ ಇದ್ದು, ಚಿಕಿತ್ಸೆಗಾಗಿ ಆಸ್ಪತ್ರೆ ಮುಂದೆ ರೋಗಿಗಳು ಸರತಿ ಸಾಲಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರೋಗಿಗಳಿಗೆ ಬೆಡ್​ ಸಿಗದ ಕಾರಣ ಹಲವಾರು ಜನರು ರಸ್ತಬದಿಯೇ ಇದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Share

Continue Reading

Dailyhunt
Disclaimer: This content has not been generated, created or edited by Dailyhunt. Publisher: AIN Live News