ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವಂತದ್ದು ಏನಾದರೂ ಕುಡೀಬೇಕು ಎನ್ನಿಸುತ್ತದೆ. ಆ ಸಂದರ್ಭದಲ್ಲಿ ಹೆಚ್ಚಿನವರು ಮಜ್ಜಿಗೆ ಕುಡಿಯಬೇಕು ಅಂತ ಅಂದುಕೊಳ್ಳುತ್ತಾರೆ. ಈ ಮಸಾಲಾ ಮಜ್ಜಿಗೆಯನ್ನು ಕುಡಿದಂತೆ ಸುಲಭವಾಗಿ ತಯಾರಿಸಬಹುದು. ಹೇಗೆ ತಯಾರಿಸಬಹುದು ಎನ್ನುವುದಕ್ಕೆ ಇಲ್ಲಿ ಮಸಾಲಾ ಮಜ್ಜಿಗೆ ಮಾಡುವ ಸಿಂಪಲ್ ವಿಧಾನವನ್ನು ನೀಡಲಾಗಿದೆ.
ಬೇಗಾಗುವ ಸಾಮಾಗ್ರಿಗಳು
* ಮೊಸರು - 1 ಕಪ್
* ಪುದಿನ - 1/2 ಕಪ್
* ಕೊತ್ತಂಬರಿ ಸೊಪ್ಪು - 1/2 ಕಪ್
* ಉಪ್ಪು - 2 ಟೀ ಚಮಚ
* ಹಸಿ ಮೆಣಸಿಕಾಯಿ - 1 ಚಮಚ
* ಜೀರಿಗೆ ಪೌಡರ್ - 1 ಚಮಚ
* ಪೆಪ್ಪರ್ ಪೌಡರ್ - 1 ಚಮಚ
ಮಾಡುವ ವಿಧಾನ
* ಮಿಕ್ಸಿಯಲ್ಲಿ ಮೆಣಸಿಕಾಯಿ, ಸ್ವಲ್ಪ ಕೊತ್ತಂಬರಿ ಮತ್ತು ಪುದಿನ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ
* ನಂತರ ಅದಕ್ಕೆ 1 ಕಪ್ ಮೊಸರು, 2 ಚಮಚ ಉಪ್ಪು, 1/2 ಪೆಪ್ಪರ್ ಪುಡಿ, 1/2 ಜೀರಿಗೆ ಮತ್ತು ಒಂದು ಕಪ್ ನೀರು ಹಾಕಿ ಒಂದು ರೌಂಡ್ ತಿರುಗಿಸಿ.
Share
Continue Reading

