Dailyhunt Logo
  • Light mode
    Follow system
    Dark mode
    • Play Story
    • App Story
ಚಾರ್ಬಾಗ್ ನಲ್ಲಿ ಹಳಿ ತಪ್ಪಿದ ರೈಲು ಬೋಗಿಗಳು

ಚಾರ್ಬಾಗ್ ನಲ್ಲಿ ಹಳಿ ತಪ್ಪಿದ ರೈಲು ಬೋಗಿಗಳು

AIN Kannada 5 years ago

ಉತ್ತರ ಪ್ರದೇಶ : ​ಅಮೃತಸರದಿಂದ ಜಯನಗರಕ್ಕೆ ಚಲಿಸುತ್ತಿದ್ದ ರೈಲಿನ ಎರಡು ಬೋಗಿಗಳು ಲಖನೌ ರೈಲ್ವೆ ವಿಭಾಗದ ಚಾರ್ಬಾಗ್ ನಿಲ್ದಾಣದ ಬಳಿ ಹಳಿ ತಪ್ಪಿವೆ. ಎರಡು ಬೋಗಿಗಳಲ್ಲಿ 155 ಪ್ರಯಾಣಿಕರಿದ್ದು, ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಹಳಿ ತಪ್ಪಿದ ಬೋಗಿಗಳು ನಿಧಾನವಾಗಿ ಪಕ್ಕಕ್ಕೆ ಜಾರಿವೆ ಎಂದು ಲಖನೌ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್​ಎಂ) ಸಂಜಯ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ. ಹಳಿ ತಪ್ಪಲು ಕಾರಣವೇನೆಂಬುದನ್ನು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗುತ್ತಿದೆ ಎಂದು ತ್ರಿಪಾಠಿ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News