AIN Live News

265k Followers

ಜೈನ್ ಕಾಲೇಜ್‍ಗೆ ಅತ್ಯೂತ್ತಮ ಫಲಿತಾಂಶ

15 Jul 2020.2:11 PM

ಬೆಂಗಳೂರು : ರಾಜ್ಯದ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಜೈನ್ ಮಹಾವಿದ್ಯಾಲಯದ ಪಿ.ಯು ವಿದ್ಯಾರ್ಥಿಗಳು ಈ ಬಾರಿಯೂ ಸಹ ಅತ್ತುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿನ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದ್ದಾರೆ.
ಜೈನ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಚೆನ್‍ರಾಜ್ ರಾಯಚಂದ್ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಭಿನಂದನೆ ತಿಳಿಸುತ್ತಾ ಮಾತನಾಡಿ, ಕಳೆದ ಮೂರು ದಶಕಗಳಿಂದ ಪಿ.ಯು, ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ನೀಡುವಲ್ಲಿ ಜೈನ್ ಕಾಲೇಜ್ ಮತ್ತು ವಿಶ್ವವಿದ್ಯಾಲಯ ರಾಜ್ಯದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ವರ್ಷದಿಂದ ವರ್ಷಕ್ಕೆ ನಮ್ಮ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ತೋರುತ್ತಿರುವ ಗಣನೀಯ ಹೆಚ್ಚಳದಿಂದ ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜೈನ್ ವಿಶ್ವವಿದ್ಯಾಲಯ ತನ್ನದೇ ಆದ ಸ್ಥಾನಮಾನ ಗಳಿಸಿಕೊಂಡಿದ್ದು, ಇದಕ್ಕೆ ಶಿಕ್ಷಕರ ಮತ್ತು ಬೋಧಕೇತರ ಸಿಬ್ಬಂಧಿಯ ಪರಿಶ್ರಮ ಅಪಾರವಿದೆ.

ಅವರಿಗೆಲ್ಲ ಧನ್ಯವಾದ ತಿಳಿಸಿಲು ಬಯಸುತ್ತೇನೆ ಎಂದು ತಿಳಿಸಿದರು.

ವಾಣಿಜ್ಯ ವಿಭಾಗದಲ್ಲಿ ಶೇ.99 ಅಂಕ ಗಳಿಸಿ ರಾಜ್ಯದ ಟಾಪರ್‍ಗಳಲ್ಲಿ ಒಬ್ಬರಾದ ಧವಣಿ ಜೈನ್ ಮಾತನಾಡಿ, ನನ್ನ ಸತತ ಪರಿಶ್ರಮದ ಜೊತೆಗೆ ಮನೆಯವರ ಸಹಕಾರ ಮತ್ತು ಜೈನ್ ಕಾಲೇಜ್‍ನ ನುರಿತ ಶಿಕ್ಷಕರ ಮಾರ್ಗದರ್ಶನ ಮತ್ತು ಸಲಹೆಗಳು ನನಗೆ ಸಹಕಾರಿಯಾದವು ಎಂದು ತಿಳಿಸಿದರೆ, ಶೇ.98.67 ಅಂಕ ಗಳಿಸಿದ ಮೊನಿಷ್ ರೆಡ್ಡಿ ಮತ್ತು ಶೆ.98.50 ಅಂಕ ಗಳಿಸಿದ ಪವಿತ್ರಾ ಮಾತನಾಡಿ, ಓದಿನಲ್ಲಿ ಸಮಸ್ಯೆಗಳು ಬಂದಾಗ ನಮ್ಮ ಶಿಕ್ಷಕರು ತಾಳ್ಮೆಯಿಂದ ನೀಡುತ್ತಿದ್ದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಇವತ್ತು ನಮ್ಮನ್ನು ರಾಜ್ಯದ ಟಾಪರ್‍ಗಳ ಲಿಸ್ಟಿನಲ್ಲಿ ತಂದು ನಿಲ್ಲಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಒಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ಅತ್ಯೂತ್ತಮ ಫಲಿತಾಂಶದತ್ತ ದಾಪುಗಾಲು ಇಡುತ್ತಿರುವ ಪ್ರತಿಷ್ಟಿತ ಜೈನ್ ಕಾಲೇಜ್ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡಾ 99ರಷ್ಟು ಫಲಿತಾಂಶ ಸಾಧಿಸಿದ್ದು, ಶಾಲೆಯ ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಪರಿಶ್ರಮವನ್ನು ಎತ್ತಿ ತೋರಿಸುತ್ತದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: AIN Live News

#Hashtags