ಕಂಗನಾ ಅಂದ್ರೆ ಹಾಗೆ ಯಾವಾಗ್ಲು ಸುದ್ದಿಯಲ್ಲಿ ಇದ್ದೇ ಇರ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಏನಾದ್ರು ಒಂದು ಕಮೆಂಟ್ ಅಥವಾ ಪೋಸ್ಟ್ ಮಾಡುತ್ತ ಎಲ್ಲರ ಗಮನವನ್ನ ಸೆಳೆಯುತ್ತಾರೆ. ಇದೀಗ ಸ್ವರಾ ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿ ಸುದ್ದಿಯಲ್ಲಿದ್ದಾರೆ. ನಟಿ ಸ್ವರಾ ಭಾಸ್ಕರ್ ಗೋಲ್ಡನ್ ಬಣ್ಣದ ಸೀರೆ ತೊಟ್ಟು ಕೊರೊಳಿಗೆ ನೆಕ್ಲೆಸ್ ಹಾಕಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಪೋಸ್ಟ್ ರಿಟ್ವೀಟ್ ಮಾಡಿರುವ ಕಂಗನಾ ರಣಾವತ್, "ಈ ಜನ ಏನ್ ಹೇಳ್ತಿದ್ದಾರೆ ಇದು ನಿಜಾನಾ" ಎಂದು ಬರೆದಿದ್ದಾರೆ. ಮತ್ತೊಂದು ಮಾತು ಹೇಳಿರುವ ಕಂಗನಾ "ಇವತ್ತು ಭಾನುವಾರ. ತುಂಬಾ ಬೋರಾಗುತ್ತಿದೆ. ಇದ್ರಿಂದ ಸ್ವರಾಳನ್ನು ಕಿಚಾಯಿಸಬೇಕು ಅನ್ನಿಸಿತು" ಎಂದಿದ್ದಾರೆ.
ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಸ್ವರಾ, "ನಿಮ್ಮ ಬೇಸರವನ್ನು ಹೋಗಲಾಡಿಸಲು ನನಗೆ ಯಾವಾಗಲೂ ಖುಷಿಯಾಗುತ್ತದೆ. ಐ ಲವ್ ಯು" ಎಂದು ಬರೆದುಕೊಂಡಿದ್ದಾರೆ. ಇನ್ನು, ಕಂಗನಾ ಸಿನಿಮಾ ವಿಚಾರಕ್ಕೆ ಬಂದ್ರೆ ತಲೈವಿ, ಮಣಿಕರ್ಣಿಕಾ ರಿಟರ್ನ್ ಹಾಗೂ ಧಾಕದ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

