Dailyhunt
ವೈದ್ಯಕೀಯ ಶಿಕ್ಷಣ ಸಚಿವರ ಹೆಸರಲ್ಲೇ ಸೃಷ್ಟಿಯಾಯ್ತು ನಕಲಿ ಇ-ಮೇಲ್

ವೈದ್ಯಕೀಯ ಶಿಕ್ಷಣ ಸಚಿವರ ಹೆಸರಲ್ಲೇ ಸೃಷ್ಟಿಯಾಯ್ತು ನಕಲಿ ಇ-ಮೇಲ್

AIN Kannada 5 years ago

ಬೆಂಗಳೂರು : ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೆಸರಲ್ಲಿ ನಕಲಿ ಇ-ಮೇಲ್ ಕ್ರಿಯೇಟ್​ ಮಾಡಿರುವ ಕುರಿತು ಸೈಬರ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಚಿವ ಡಾ.ಕೆ.ಸುಧಾಕರ್ ಹೆಸರಲ್ಲಿ [email protected] ಎಂಬ ನಕಲಿ ಇ-ಮೇಲ್ ಸೃಷ್ಟಿಸಿ, ನಾನು ಸಚಿವ ಡಾ.ಕೆ.ಸುಧಾಕರ್ ನಮಗೆ ನಿಮ್ಮ ಸಹಾಯ ಬೇಕಿದೆ.

ಅಮೆಜಾನ್​ನಲ್ಲಿ ಗಿಫ್ಟ್ ಖರೀದಿಸಲು ಸಹಾಯ ಮಾಡಿ ಎಂದು ಶಿಕ್ಷಣ ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಮೇಲ್ ಕಳುಹಿಸಿ ಸಹಾಯಯಾಚನೆ ಮಾಡಿದ್ದಾರೆ. ಸರ್ಕಾರದ ಅಧಿಕೃತ ಮೇಲ್ ಐಡಿಗಳಿಗೆ ನಕಲಿ ಇ-ಮೇಲ್ ಸಂದೇಶ ರವಾನಿಸಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಸುಧಾಕರ್ ಅವರ ವಿಶೇಷಾಧಿಕಾರಿ ಗಿರಿಗೌಡ ಬಿ.ಕೆ ಎಂಬುವವರು ಸಚಿವರ ಗಮನಕ್ಕೆ ತಂದಿದ್ದು, ಸೆಂಟ್ರಲ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News