Dailyhunt Logo
  • Light mode
    Follow system
    Dark mode
    • Play Story
    • App Story

ಆಪರೇಷನ್‌ ಸಿಂಧೂರಕ್ಕೆ ಒಂದು ವರ್ಷ: ಇನ್ನೂ ಚೇತರಿಸಿಕೊಳ್ಳದ ಪಾಕ್‌

ವದೆಹಲಿ: ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ 26 ಜೀವಗಳನ್ನು ಬಲಿ ಪಡೆದ ಉಗ್ರರಿಗೆ ತಕ್ಕ ಪಾಠ ಕಲಿಸಿದ ಆಪರೇಷನ್‌ ಸಿಂಧೂರಕ್ಕೆ ಒಂದು ವರ್ಷವಾಗಿದೆ.

2025ರ ಏಪ್ರಿಲ್.‌22ರಂದು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ವ್ಯಾಲಿಯಲ್ಲಿ ಪ್ರವಾಸಿಗರ ಮೇಲೆ ಏಕಾಏಕಿ ಉಗ್ರರು ಬಂದು ಅಲ್ಲಿದ್ದ 26 ಮಂದಿ ಹಿಂದುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್‌ ಸಿಂಧೂರ ಎಂಬ ಹೆಸರಿನಲ್ಲಿ ಮೇ.7, 8ರ ರಾತ್ರಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿತ್ತು. ಕೇವಲ 23 ನಿಮಿಷಗಳ ಕಾಲ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆ ಪಾಕ್‌ನ 9 ಉಗ್ರನೆಲೆಗಳನ್ನು ಧ್ವಂಸಗೊಳಿಸಿತ್ತು.

ಅಂದು ಭಾರತ ನೀಡಿದ್ದ ಏಟಿಗೆ ಇನ್ನೂ ಮುಲಾಮು ಸವರಿಕೊಳ್ಳುತ್ತಿರುವ ಪಾಕಿಸ್ತಾನ, ಕೆಲ ವಾಯುನೆಲೆಗಳ ಆಸೆಯನ್ನೇ ಕೈಬಿಟ್ಟಿದೆ. ಮತ್ತೆ ಕೆಲವು ಉಗ್ರನೆಲೆಗಳ ಮರುನಿರ್ಮಾಣದಲ್ಲಿ ತೊಡಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Andolana