Dailyhunt Logo
  • Light mode
    Follow system
    Dark mode
    • Play Story
    • App Story
ಇದು ಹೆಲಿಟೂರಿಸಂಗಲ್ಲ, ಮೈಸೂರಿನಲ್ಲಿ ಮತ್ತೊಂದೆಡೆ 50 ಮರ ಕಡಿಯಲು ಗುರುತು!!

ಇದು ಹೆಲಿಟೂರಿಸಂಗಲ್ಲ, ಮೈಸೂರಿನಲ್ಲಿ ಮತ್ತೊಂದೆಡೆ 50 ಮರ ಕಡಿಯಲು ಗುರುತು!!

ಮೈಸೂರು: ಹೆಲಿಟೂರಿಸಂಗಾಗಿ ಹನನ ಮಾಡಲು ನೂರಾರು ಮರಗಳನ್ನು ಗುರುತು ಮಾಡಿರುವ ಬೆನ್ನಲ್ಲೇ ಪರಿಸರವಾದಿಗಳು ಹಾಗೂ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕೊಟ್ಟಂತಾಗಿದೆ.

ವಿಜಯನಗರ 1ನೇ ಹಂತದ 2ನೇ ಮುಖ್ಯರಸ್ತೆಯಲ್ಲಿಯೂ 50 ಮರಗಳ ಹನನ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಈ ರಸ್ತೆ ನವೀಕರಣ ಮತ್ತು ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಇದಕ್ಕಾಗಿ ಮರಗಳನ್ನು ಕಡಿಯಲು ಮುಂದಾಗಿದ್ದಾರೆ.

ಬೇಸಿಗೆಯ ಬಿರು ಬಿಸಿಲಿನಲ್ಲಿ ಇಲ್ಲಿನ ಮರಗಳಿಂದಲೇ ತಂಪು ಕಾಣುತ್ತಿದ್ದೇವೆ. ಸದ್ಯ ನಮಗೆ ಇರುವ ರಸ್ತೆಯನ್ನೇ ದುರಸ್ತಿಗೊಳಿಸಿದರೂ ಸಾಕು, ಅದನ್ನು ಬಿಟ್ಟು ಮರ ಕಡಿಯುವುದು ಒಳ್ಳೆಯದಲ್ಲ ಎನ್ನುವುದು ಇಲ್ಲಿನ ಸ್ಥಳೀಯರ ಆರೋಪ.

ನಮಗೆ ರಸ್ತೆ ವಿಸ್ತರಣೆ ಮಾಡಲು ತಿಳಿಸಿದ್ದಾರೆ.ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು,ಮುಡಾ ಅಧಿಕಾರಿಗಳೇ ಮರಗಳನ್ನು ಗುರುತು ಮಾಡಿದ್ದಾರೆ.

ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಇಲಾಖೆ ಅನುಮತಿ ನೀಡಿದಲ್ಲಿ, ಮರಗಳನ್ನು ತೆಗೆಯುತ್ತೇವೆ. ಇಲ್ಲವೇ ಇರುವ ರಸ್ತೆಯನ್ನೇ ದುರಸ್ತಿಮಾಡುತ್ತೇವೆ ಎನ್ನುತ್ತಾರೆ ಮೇಸ್ತ್ರೀ ಕೃಷ್ಣ.

Dailyhunt
Disclaimer: This content has not been generated, created or edited by Dailyhunt. Publisher: Andolana