Dailyhunt Logo
  • Light mode
    Follow system
    Dark mode
    • Play Story
    • App Story

ಇರಾನ್‌ ಮೇಲೆ ಅಮೇರಿಕಾ ವಾಯುದಾಳಿ: ರೇಡಾರ್‌ ಕೇಂದ್ರಗಳು ಧ್ವಂಸ

ವಾಷಿಂಗ್ಟನ್:‌ ಅಮೇರಿಕಾ ವಾರಾಂತ್ಯದಲ್ಲಿ ಇರಾನ್‌ನ ರಾಡಾರ್‌ ಮತ್ತು ಡ್ರೋನ್‌ ನಿಯಂತ್ರಣ ಕೇಂದ್ರಗಳ ಮೇಲೆ ರಕ್ಷಣಾತ್ಮಕ ದಾಳಿ ನಡೆಸಿದೆ.

ಇರಾನ್‌ನ ಗೊರುಕ್‌ ಮತ್ತು ಕ್ವೆಶ್ಮ್‌ ದ್ವೀಪಗಳಲ್ಲಿರುವ ಕೇಂದ್ರಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಅಮೇರಿಕಾದ ಸೆಂಟ್ರಲ್‌ ಕಮಾಂಡ್‌ ತಿಳಿಸಿದೆ.

ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೇರಿಕಾ ಎಂಕ್ಯೂ-1 ಡ್ರೋನ್‌ ಅನ್ನು ಇರಾನ್‌ ಹೊಡೆದುರುಳಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ಕೇಂದ್ರ ಕಮಾಂಡ್‌ ಹೇಳಿದೆ.

ದಾಳಿಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ, ಡ್ರೋನ್ ನಿಯಂತ್ರಣ ಕೇಂದ್ರ ಹಾಗೂ ಎರಡು ದಾಳಿ ನಡೆಸುವ ಡ್ರೋನ್‌ಗಳನ್ನು ನಾಶಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಯಾವುದೇ ಅಮೇರಿಕಾ ಸೇನಾ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Andolana