Dailyhunt

ಮಡಿಕೇರಿ | ಕಾರಿನ ಮೇಲೆ ಉರುಳಿ ಬಿದ್ದ ಪ್ರವಾಸಿಗರ ಬಸ್

ಡಿಕೇರಿ : ಪ್ರವಾಸಿಗರ ಬಸ್​​ವೊಂದು ಕಾರಿನ‌ ಮೇಲೆ ಉರುಳಿ ಬಿದ್ದಿರುವ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ನಡೆದಿದೆ.

ಕಾರಿನಲ್ಲಿದ್ದ ನಾಲ್ವರು ಪವಾಡ ಸದೃಶ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ‌ ಸುದೀಪ್​ ಅತಿ ವೇಗವಾಗಿ ಬಸ್ ಚಲಾಯಿಸಿದ್ದಾರೆ.

ಈ ವೇಳೆ ರಸ್ತೆ‌ ಬದಿ‌ ನಿಂತಿದ್ದ ಕಾರಿನ‌ ಮೇಲೆ ಬಸ್ ಉರುಳಿ ಬಿದ್ದಿದೆ. ಸದ್ಯ ​​ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Andolana