Dailyhunt Logo
  • Light mode
    Follow system
    Dark mode
    • Play Story
    • App Story

ಮೈಸೂರು ದಸರಾ ಗಜಪಡೆ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಶ್ರೀಕಂಠನಿಗೆ ಮೊದಲ ಸ್ಥಾನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.

ಮೈಸೂರಿನ ಧನ್ವಂತರಿ ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳ ತೂಕ ಪರೀಕ್ಷೆ ನಡೆಯಿತು.

ದಸರಾ ಗಜಪಡೆಯ ಆನೆಗಳ ತೂಕ ಹೀಗಿದೆ:

• ಮಹೇಂದ್ರ - 5,490 ಕೆ.ಜಿ.
• ಲಕ್ಷ್ಮೀ - 3,990 ಕೆ.ಜಿ.
• ಪ್ರಶಾಂತ - 5,205 ಕೆ.ಜಿ.
• ಧನಂಜಯ - 5,530 ಕೆ.ಜಿ.
• ಶ್ರೀರಾಮ - 4,820 ಕೆ.ಜಿ.
• ಕಾವೇರಿ - 3,075 ಕೆ.ಜಿ.
• ಶ್ರೀಕಂಠ - 5,790 ಕೆ.ಜಿ.
• ಏಕಲವ್ಯ - 5,600 ಕೆ.ಜಿ.
• ಗೋಪಿ - 5,170 ಕೆ.ಜಿ.

ಈ ಪೈಕಿ ಶ್ರೀಕಂಠ ಆನೆ 5,790 ಕೆ.ಜಿ. ತೂಕದೊಂದಿಗೆ ಅತಿ ಹೆಚ್ಚು ತೂಕ ಹೊಂದಿದೆ. ನಂತರದ ಸ್ಥಾನದಲ್ಲಿ ಏಕಲವ್ಯ 5,600 ಕೆ.ಜಿ. ಹಾಗೂ ಧನಂಜಯ 5,530 ಕೆ.ಜಿ. ತೂಕ ಹೊಂದಿವೆ.

ಮೈಸೂರು ದಸರಾ ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆಯ ಆನೆಗಳ ಆರೋಗ್ಯ ಹಾಗೂ ತೂಕದ ಮೇಲೂ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Andolana