Dailyhunt Logo
  • Light mode
    Follow system
    Dark mode
    • Play Story
    • App Story

ಓದುಗರ ಪತ್ರ: ದೇವನೂರರ ಸಲಹೆಗಳು ಅನುಷ್ಠಾನಗೊಳ್ಳಲಿ

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಕೆ.ಪಿ.ಎಸ್. ಶಾಲೆಗಳ ರೂಪರೇಷೆ ಹಾಗೂ ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ ಸಲಹೆಗಳನ್ನು ಕೇಳಲು ನಾಡಿನ ಸಾಕ್ಷಿಪ್ರಜ್ಞೆ, ಹಿರಿಯ ಸಾಹಿತಿ ದೇವನೂರ ಮಹಾದೇವರವರನ್ನು ಭೇಟಿ ಮಾಡಿ ಚರ್ಚಿಸಿರುವುದು ಒಳ್ಳೆಯ ಬೆಳವಣಿಗೆ.

ದೇವನೂರರು ಕೆಪಿಎಸ್ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲು ಮೌಲ್ಯಯುತ ಸಲಹೆಗಳನ್ನು ನೀಡಿದ್ದು, ಸದರಿ ಸಲಹೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದರೆ ಗ್ರಾಮೀಣ ಮತ್ತು ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ.

– ಡಾ.ಬಿ.ಆರ್.ಮಂಜುನಾಥ, ಬೆಂಡರವಾಡಿ, ಗುಂಡ್ಲುಪೇಟೆ

Dailyhunt
Disclaimer: This content has not been generated, created or edited by Dailyhunt. Publisher: Andolana