Dailyhunt Logo
  • Light mode
    Follow system
    Dark mode
    • Play Story
    • App Story

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು.

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು ವರ್ಷಗಳ ಹಿಂದೆ ವಿವಾದಾತ್ಮಕ ಸ್ಥಳವಾಗಿತ್ತು.ಈ ಜಗದಲ್ಲಿ ಹಿಂದೆ ಇದ್ದ ಎಂಟಿಎಸ್ ಶಾಲೆಯನ್ನೇ ಹೊಸದಾಗಿ ನಿರ್ಮಿಸಬೇಕೆಂದು, ಮೈಸೂರಿನ ಹಲವಾರು ಪ್ರಗತಿಪರ ಸಂಘಟನೆಗಳು, ಧರಣಿ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿದರು.

ಆದರೆ ಈ ಜಗವು ರಾಮಕೃಷ್ಣ ಆಶ್ರಮಕ್ಕೇ ಸೇರಬೇಕು, ಈ ಜಗವು ವಿವೇಕಾನಂದರು ಧ್ಯಾನ ಮಾಡಿದ ಸ್ಥಳವಾಗಿದ್ದು, ಇ ವಿವೇಕ ಸ್ಮಾರಕ ನಿರ್ಮಾಣವಾಗಬೇಕೆಂದು ಮೈಸೂರಿನ ಹಲವಾರು ಹಿರಿಯ ಗಣ್ಯ ನಾಗರಿಕರಿಂದ ನಿರಂತರ ಹೋರಾಟವೂ ನಡೆಯಿತು.

ಇದರಲ್ಲಿ ಪ್ರಮುಖವಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇ ಗೌಡರವರ ನೇತೃತ್ವದಲ್ಲಿ ನಿರಂತರ ಹೋರಾಟ ಮತ್ತು ಅವರ ಪ್ರಯತ್ನದಿಂದ ಈ ಜಗವು ರಾಮಕೃಷ್ಣ ಆಶ್ರಮಕ್ಕೆ ಸೇರುವಂತಾಯಿತು. ನಂತರ ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ಜಗವು ರಾಮಕೃಷ್ಣ ಆಶ್ರಮದ ಪಾಲಿಗೆ ಸೇರುವಂತಾಯಿತು.ಆದರೆ ವಿವೇಕ ಸ್ಮಾರಕ ಉದ್ಘಾಟನಾಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮವು ಡಿ.ಮಾದೇಗೌಡರ ಹೆಸರನ್ನು eಪಿಸುಕೊಳ್ಳದೇ, ಹೋರಾಟಗಾರರಿಗೆ ಕೃತಜ್ಞತೆ ಹೇಳುವುದನ್ನೇ ಮರೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ, ವಿವೇಕ ಸ್ಮಾರಕದ ಜಗವು ರಾಮಕೃಷ್ಣ ಆಶ್ರಮಕ್ಕೆ ಸೇರಬೇಕು ಎಂದು ಹೋರಾಟ ನಡೆಸಿದವರಿಗೆ ವಂದನೆಗಳು ಎಂದು ಹೇಳಿದ್ದರೂ ಸಮಾರಂಭ ಇನ್ನು ಹೆಚ್ಚು ಅರ್ಥಪೂರ್ಣವಾಗುತ್ತಿತ್ತು.

– ಬೂಕನಕೆರೆ ವಿಜೇಂದ್ರ, ಮೈಸೂರು

Dailyhunt
Disclaimer: This content has not been generated, created or edited by Dailyhunt. Publisher: Andolana