Dailyhunt Logo
  • Light mode
    Follow system
    Dark mode
    • Play Story
    • App Story

ಓದುಗರ ಪತ್ರ: ತಮಿಳುನಾಡು ಮುಖ್ಯಮಂತ್ರಿ ನಡೆ ಶ್ಲಾಘನೀಯ

ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಚಿತ್ರನಟ ಜೋಸೆಫ್ ವಿಜಯ್ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಒಂದೇ ರಸ್ತೆಯಲ್ಲಿ ಒಂದು ಕಡೆ ಸಾರ್ವಜನಿಕರು ಮತ್ತೊಂದು ಕಡೆ ತಾವುಸಾಗುತ್ತಿದ್ದು, ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾಮಾನ್ಯರಲ್ಲಿ ಸಾಮಾನ್ಯರಂತೆ ತಮಿಳುನಾಡು ಮುಖ್ಯಮಂತ್ರಿ ರಸ್ತೆಯಲ್ಲಿ ಹೋಗಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ. ಪ್ರಧಾನ ಮಂತ್ರಿಗಳು,ಮುಖ್ಯಮಂತ್ರಿಗಳು, ಸಚಿವರು ಕಾರ್ಯನಿಮಿತ್ತ ಆಗಮಿಸುವ ವೇಳೆ ಅನೇಕ ರಸ್ತೆಗಳನ್ನು ಬಂದ್ ಮಾಡಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡೆತಡೆಗಳುಂಟಾಗುವಂತೆ ಮಾಡುವುದು ಸಾಮಾನ್ಯ. ಇಂತಹವರ ಮಧ್ಯೆ, ತಮಿಳುನಾಡಿನ ನೂತನ ಮುಖ್ಯಮಂತ್ರಿ ನಗರ ಪ್ರದೇಶದೊಳಗೆ ಜೀರೋ ಟ್ರಾಫಿಕ್ ಬಳಸದೆ ಸಾರ್ವಜನಿಕರ ನಡುವೆಯೇ ಸಾಗಿರುವುದು ದೇಶದ ಇತರ ಅಧಿಕಾರಸ್ಥ ರಾಜಕಾರಣಿಗಳಿಗೆ ಮಾದರಿಯಾಗಿದೆ. ಉನ್ನತ ಸ್ಥಾನಗಳಲ್ಲಿ ಇರುವವರು ಈ ನಡೆ ಅನುಸರಿಸಿದರೆ ರಸ್ತೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗಲಾರದು.

-ನಾಗೇಶ್ , ಮಾನಸಗಂಗೋತ್ರಿ , ಮೈಸೂರು

Dailyhunt
Disclaimer: This content has not been generated, created or edited by Dailyhunt. Publisher: Andolana