Dailyhunt

SSLC RESULTS | ಮನಸ್ವಿನಿ ಪ್ರದೀಪ್‌ ಮೈಸೂರಿಗೆ ಟಾಪರ್‌

ಮೈಸೂರು : ಜಿಲ್ಲೆಯ ವಿಜಯ ವಿಠ್ಠಲ ಶಾಲೆಯ ವಿದ್ಯಾರ್ಥಿನಿ ಮನಸ್ವಿನಿ ಪ್ರದೀಪ್‌ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 624ಅಂಕಗಳನ್ನು ಗಳಿಸಿ ಜಿಲ್ಲೆಗೆ ಟಾಪರ್‌ ಆಗಿದ್ದಾರೆ.

ವಿದ್ಯಾರ್ಥಿನಿ ಮನಸ್ವಿನಿ ಪ್ರದೀಪ್‌ ಅವರು ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿಯಾಗಿರುವ ಪ್ರದೀಪ್ ಹಾಗೂ ರಾಧ ಅವರ ಪುತ್ರಿಯಾಗಿದ್ದಾರೆ.

ವಿದ್ಯಾರ್ಥಿನಿ ಮನಸ್ವಿನಿ ಪ್ರದೀಪ್‌ ಅವರು 625ಕ್ಕೆ 624 ಅಂಕಗಳಿಸಿ ಜಿಲ್ಲೆಗೆ ಮೊದಲು ಹಾಗೂ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದಿದ್ದಾರೆ.

ನನಗೆ ಬಹಳ ಸಂತಸವಾಗಿದೆ. ನಾನು ಪ್ರತಿ ನಿತ್ಯ 4 ಗಂಟೆಗಳ ಕಾಲ ಓದುತ್ತಿದ್ದೆ. ಮನೆಯಲ್ಲಿ ಪೋಷಕರು ತುಂಬಾ ಸಹಾಯ ಮಾಡುತ್ತಿದ್ದರು. ಶಾಲೆಯಲ್ಲಿ ಶಿಕ್ಷಕರು ಎಲ್ಲಾ ವಿಷಯದಲ್ಲೂ ಚೆನ್ನಾಗಿ ಪಾಠ ಮಾಡ್ತಿದ್ರು, ಏನೇ ಡೌಟ್ಸ್ ಇದ್ರು ಎಷ್ಟು ಬಾರಿ ಕೇಳಿದ್ರು ಹೇಳಿಕೊಡ್ತಿದ್ರು ಎಂದು ವಿದ್ಯಾರ್ಥಿನಿ ಮನಸ್ವಿನಿ ಪ್ರದೀಪ್ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Andolana