Wednesday, 28 Apr, 12.25 pm ಆಂದೋಲನ

ಮುಖಪುಟ
ತೆಲುಗು ನಟ ಅಲ್ಲು ಅರ್ಜುನ್‌ಗೆ ಕೊರೋನಾ ಪಾಸಿಟಿವ್

ಹೈದರಾಬಾದ್‌: ತೆಲುಗು ನಟ ಅಲ್ಲು ಅರ್ಜುನ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಟ್ವಿಟರ್‌ನಲ್ಲಿ ಈ ವಿಷಯವನ್ನು ಅಲ್ಲು ಅರ್ಜುನ್‌ ಅವರೇ ಖಚಿತಪಡಿಸಿದ್ದಾರೆ.

ಮನೆಯಲ್ಲೇ ಅಲ್ಲು ಅರ್ಜುನ್ ಹೋಂ-ಕ್ವಾರೈಂಟೆನ್ ಆಗಿದ್ದು, ಶೂಟಿಂಗ್‌ಗೆ ಬ್ರೇಕ್‌ ಬಿದ್ದಿದೆ.

ಸದ್ಯಕ್ಕೆ 'ಪುಷ್ಪಾ' ಸಿನಿಮಾ ಶೂಟಿಂಗ್‌ ನಡೆಯುತ್ತಿತ್ತು. ಅವರ ಹುಟ್ಟುಹಬ್ಬದ ಹಿನ್ನೆಲೆ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿತ್ತು.

ಅಭಿಮಾನಿಗಳಿಗೆ ಆತಂಕ ಪಡದಂತೆ ಅಲ್ಲು ಅರ್ಜುನ್ ಮನವಿ ಮಾಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Andolana
Top