Dailyhunt Logo
  • Light mode
    Follow system
    Dark mode
    • Play Story
    • App Story

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ತೊಟ್ಟಿಲು ಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದ ವಿಶೇಷ ಪೂಜೆಯಲ್ಲಿ ಚಲನಚಿತ್ರ ನಟಿ ತಾರಾ ಹಾಗೂ ನಟ ಶಶಿಕುಮಾರ್ ಭಾಗವಹಿಸಿದ್ದರು.

ಈ ವೇಳೆ ಚಲನಚಿತ್ರ ನಟ ಶಶಿಕುಮಾರ್ ಮಾತನಾಡಿ, ದೊಡ್ಡಾಲತ್ತೂರು ಗ್ರಾಮದ ಬೆಟ್ಟದ ಶಂಕರಪ್ಪರವರು ಮಕ್ಕಳಿಲ್ಲದ ಹೆಣ್ಣು ಮಕ್ಕಳಿಗೆ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ನಾಟಿ ಔಷಧಿಯನ್ನು ಕೊಟ್ಟು ಹಲವಾರು ವರ್ಷಗಳಿಂದ ತೊಟ್ಟಿಲು ಪೂಜೆ ಮಾಡಿಸಿಕೊಂಡು ಹೋಗಿರುವ ಸಾವಿರಾರು ಹೆಣ್ಣು ಮಕ್ಕಳಿಗೆ ಮಕ್ಕಳಾಗಿರುವುದು ಸಂತಸದ ವಿಚಾರ ಎಂದರು.

ಬೆಟ್ಟದ ಶಂಕರಪ್ಪನವರು ಮಕ್ಕಳಿಲ್ಲದ ಹೆಣ್ಣು ಮಕ್ಕಳಿಗೆ ಹಲವಾರು ವರ್ಷಗಳಿಂದ ನಾಟಿ ಔಷಧ ಕೊಡುತ್ತಾ ಬಂದಿದ್ದಾರೆ. ವೈದ್ಯರು ಮಕ್ಕಳೇ ಆಗುವುದಿಲ್ಲವೆಂದು ಹೇಳಿದ್ದರೂ ದಂಪತಿಗಳು ಈ ಕ್ಷೇತ್ರಕ್ಕೆ ಬಂದು ಔಷಧಿ ಪಡೆದುಕೊಂಡು ಮಕ್ಕಳಾಗಿರುವ ಹಲವು ನಿರ್ದೇಶನಗಳಿವೆ ಎಂದರು.

ಚಲನಚಿತ್ರ ನಟಿ ತಾರಾ ಮಾತನಾಡಿ, ಒಬ್ಬ ಹೆಣ್ಣು ಮಗಳು ತಾಯಿಯಾದಾಗ ಅದರಲ್ಲಿ ಸಿಗುವ ಸಂತೋಷ ಎಲ್ಲಿಯೂ ಸಿಗುವುದಿಲ್ಲ. ಬೆಟ್ಟದ ಶಂಕರಪ್ಪರವರು ಮಕ್ಕಳಾಗದವರಿಗೆ ನಾಟಿ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ನಾಟಿ ಔಷಧಿಯನ್ನು ಕೊಟ್ಟು ತೊಟ್ಟಿಲು ಪೂಜೆ ಮಾಡಿಸಿದ ನಂತರ ಹೆಣ್ಣುಮಕ್ಕಳಿಗೆ ಮಕ್ಕಳಾಗಿದೆ. ಅವರು ನಿಸ್ವಾರ್ಥದಿಂದ ತಮ್ಮ ಹಿರಿಯರು ಮಾಡಿಕೊಂಡು ಬಂದಿರುವ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇವರ ಸೇವೆ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.

ಬೆಟ್ಟದ ಶಂಕರಪ್ಪ ಮಾತನಾಡಿ, ತಾಯ್ತನ ಎಂಬುದು ಎಲ್ಲರಿಗೂ ಸಿಗುವುದಿಲ್ಲ, ಹಲವಾರು ವರ್ಷಗಳ ಕಾಲ ಮಕ್ಕಳಿಲ್ಲದೆ ನಮ್ಮ ಬಳಿ ತಮ್ಮ ಕಷ್ಟ ಹೇಳಿಕೊಂಡು ಬಂದಂತಹ ದಂಪತಿಗಳಿಗೆ ಧೈರ್ಯ ತುಂಬಿ ನಾಟಿ ಔಷಧಿ ನೀಡಿ ತೊಟ್ಟಿಲು ಪೂಜೆ ಮಾಡಿಸಿ ಕಳುಹಿಸಿದ್ದು, ಸಾವಿರಾರು ಮಂದಿಗೆ ಮಕ್ಕಳಾಗಿದೆ. ಮಕ್ಕಳಾದ ನಂತರ ನಮ್ಮ ಮಕ್ಕಳೇಶ್ವರ ಸ್ವಾಮಿ ಪುಣ್ಯಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿಕೊಂಡು ಹೋಗುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ದಂಪತಿಗಳು, ಕುಟುಂಬಸ್ಥರು, ಗ್ರಾಮಸ್ಥರು ಹಾಜರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Andolana