Dailyhunt

ಯುದ್ಧದ ವಿಚಾರದಲ್ಲಿ ರಾಜಕೀಯ ‌ಮಾಡುವುದು ಬೇಕಾಗಿಲ್ಲ: ಸಂಸದ ಯದುವೀರ್‌ ಒಡೆಯರ್‌

ಡಿಕೇರಿ: ಯುದ್ಧದ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದ್ದಾರೆ.

ಈ ಕುರಿತು ಮಡಿಕೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಸ್‌ ಟ್ರಬಲ್‌ಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.

ಈಗಾಗಲೇ ದೇಶದಲ್ಲಿ ಯಾವುದೇ ಗ್ಯಾಸ್ ಸಮಸ್ಯೆ ಇಲ್ಲ. ಎಲ್ಲಾ ರಾಜ್ಯಗಳಿಗೆ ಗ್ಯಾಸ್ ಸರಬರಾಜು ಅಗುತ್ತಿದೆ. ಈಗಾಗಲೇ ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅಧಿವೇಶನದಲ್ಲಿ ತಿಳಿಸಿದ್ದಾರೆ. ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಭಾರತದಲ್ಲಿ ಯಾವುದೇ ರೀತಿಯಲ್ಲಿ ಗ್ಯಾಸ್ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಗ್ಯಾಸ್ ಉತ್ಪಾದನೆ ಹೆಚ್ಚು ಮಾಡಲು ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದಾರೆ. ಈ‌ ಹಿಂದೆ ಒಂದು ಒಂದು ಜಾಗದಲ್ಲಿ ತೆಗೆದುಕೊಳ್ಳುತ್ತಿದ್ರು‌. ಅದರೆ ಇದೀಗ ಎಲ್ಲಾ ಕಡೆಯಿಂದಲೂ LPG ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಿದರು.

ಇನ್ನು ಯುದ್ಧದ ವಿಚಾರದಲ್ಲಿ ರಾಜಕೀಯ ‌ಮಾಡುವುದು ಬೇಕಾಗಿಲ್ಲ. ಯಾವುದೋ ಒಂದು ನಮ್ಮ ನಿಯಂತ್ರಣದಲ್ಲಿ ಇಲ್ಲದೇ ಇರುವ ಯುದ್ದದಿಂದ ಈ ರೀತಿಯ ಸಮಸ್ಯೆ ಅಗುತ್ತಿದೆ. ಯುದ್ದದಿಂದ ಸಾಕಷ್ಟು ಸಮಸ್ಯೆ ಅಗುತ್ತಿದ್ರು ಭಾರತ ಸರ್ಕಾರ ಎಲ್ಲರಿಗೂ LPG ಕೋಡುವ ಕೆಲಸ ಮಾಡುತ್ತಿದೆ. ಈ ರೀತಿಯ ಹೇಳಿಕೆ ಕೊಟ್ಟಿಕೊಂಡು ರಾಜಕೀಯ ಲಾಭ ಪಡೆಯುವುದು ಅತ್ಯಂತ ಖಂಡನೀಯ ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Andolana