Dailyhunt
ಬೆಲೆಯಿಲ್ಲದಿರೆ ನೆಲೆಯಿಲ್ಲ..

ಬೆಲೆಯಿಲ್ಲದಿರೆ ನೆಲೆಯಿಲ್ಲ..

ಅವಧಿ 4 years ago

ಸುರೇಶ ಎಲ್ ರಾಜಮಾನೆ

ಅಮರರಾಗುವದು ಎಂದರೆ ಸಾವನ್ನು ಗೆಲ್ಲುವದಲ್ಲ
ಸಾಯುವುದೆಂದರೆ ಜೀವವನ್ನು ಕಳೆದುಕೊಳ್ಳುವದಲ್ಲ

ನಡೆಯಬೇಕು ಓಡಬೇಕು ಬೀಳಬೇಕು ಏಳಬೇಕು
ಆಡಿಸುವಾತ ಆಡಿಸಿದಂಗೆ ಆಡಲೇಬೇಕು ಬೇರೆ ದಾರಿಯಿಲ್ಲ

ನಗಬೇಕು ಅಳಬೇಕು ನಗಿಸಬೇಕು ತಲೆಬಾಗಿಸಬೇಕು
ಎಲ್ಲದಕ್ಕೂ ಬೆಲೆಯಿದೆ ಬೆಲೆಯಿಲ್ಲದಿರೆ ನೆಲೆಯೂರಲಾಗುವದಿಲ್ಲ

ಹತ್ತಬೇಕು ಇಳಿಯಬೇಕು ಸುತ್ತಬೇಕು ತಪ್ಪಿದ್ದಲ್ಲ
ತುತ್ತು ಕೂಳಿಗೆ ಕೂಲಿ ಹೊತ್ತು ಸತ್ತರೇನು ತಪ್ಪಿಲ್ಲ

ಹೊಲ ಮನೆ ಆಸ್ತಿ ಅಂತಸ್ತು ಇರುವಷ್ಟು ಹೊತ್ತು ಮಾತ್ರ ಗೊತ್ತಲ್ಲ
ತಿಳಿದಿರಲಿ, ಬಿದ್ದ ಗೋಡೆಯು ತಾನಾಗೆ ಎಂದೂ ಎದ್ದು ನಿಲ್ಲೊಲ್ಲ

ಗಾಳಿ ಮಳೆ ಚಳಿ ಬಿಸಿಲು ಎಲ್ಲವೂ ಸೃಷ್ಟಿಯದ್ದೇ ಸೃಷ್ಟಿ
ಬದುಕಿನ ದೃಷ್ಟಿ ದೋಷಪೂರಿತವಾದರೆ ದಿಕ್ಕು ತೋಚುವುದಿಲ್ಲ

ಸೂರ್ಯ ಚಂದ್ರ ಆಕಾಶ ನಕ್ಷತ್ರ ಹೊಗಳಿಕೆಗೆ ಮಾತ್ರ ಚಂದ
ಕಾಯಕದಿಂದಲೇ ನಾಯಕರಾಗುವದು ಅಷ್ಟು ಸುಲಭವಲ್ಲ

Dailyhunt
Disclaimer: This content has not been generated, created or edited by Dailyhunt. Publisher: Avadi