Sunday, 29 Nov, 12.40 pm Bakkaprabhu Uppar

Posts
ಕಳೆದ 9 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಎಷ್ಟಾಯ್ತು?

ಕಳೆದ 9 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಎಷ್ಟಾಯ್ತು?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರುಪೇರು, ಲಸಿಕೆ ಸಂಶೋಧನೆ ಸುದ್ದಿ, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡುತ್ತಿವೆ.

ಭಾನುವಾರ(ನ.29) ಕೂಡಾ ಇಂಧನ ದರ ಏರಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಮಾಹಿತಿ ಪ್ರಕಾರ, ಕಳೆದ 9 ದಿನಗಳಲ್ಲಿ 8 ದಿನ ಬೆಲೆ ಏರಿಕೆ ಕಾಣಲಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ 82ರು ದಾಟಿದ್ದರೆ, ಡೀಸೆಲ್ ದರ 72 ರು ದಾಟಿದೆ. ಶನಿವಾರದಂದು ಪೆಟ್ರೋಲ್ 24 ಪೈಸೆ/ಲೀಟರ್ ಹಾಗೂ ಡೀಸೆಲ್ 27 ಪೈಸೆ/ಲೀಟರ್ ಏರಿಕೆ ಕಂಡಿತ್ತು

ಪರಿಷ್ಕೃತ ದರದ ಪ್ರಕಾರ ದೆಹಲಿಯಲ್ಲಿ 81.89ರು/ಲೀಟರ್ ಇದ್ದ ಪೆಟ್ರೋಲ್ ದರ 82.13ರು ಆಗಿದೆ. ಇದೇ ವೇಳೆ ಡೀಸೆಲ್ ದರ ಪ್ರತಿ ಲೀಟರ್ 71.86ರು ನಿಂದ 72.13ರು ಪ್ರತಿ ಲೀಟರ್ ಆಗಿದೆ. .

ನವೆಂಬರ್ 20 ರಿಂದ ರೀಟೈಲರ್ಸ್ ಬೆಲೆ ಏರಿಕೆ ಮಾಡುತ್ತಿದ್ದು, ಒಟ್ಟಾರೆ, 9ದಿನಗಳಲ್ಲಿ ಪೆಟ್ರೋಲ್ ಬೆಲೆ 1.07ರು ಪ್ರತಿ ಲೀಟರ್ ಹಾಗೂ ಡೀಸೆಲ್ 1.67 ರು ಪ್ರತಿ ಲೀಟರ್ ಏರಿಕೆ ಕಂಡಿದೆ. ಸೆಪ್ಟೆಂಬರ್ 22ರಿಂದ ಪೆಟ್ರೋಲ್ ದರ ಹಾಗೂ ಅಕ್ಟೋಬರ್ 2ರಿಂದ ಡೀಸೆಲ್ ದರದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿರಲಿಲ್ಲ. ಆದರೆ, ಈಗ ಸತತ ಏರಿಕೆಯಿಂದ ವಾಹನ ಸವಾರರು ಕಂಗಾಲಾಗಿದ್ದಾರೆ.

ಕೊವಿಡ್ 19 ಸಾಂಕ್ರಾಮಿಕ ಸಂದರ್ಭದಲ್ಲಿ ಜೂನ್ 30 ರಿಂದ ಆಗಸ್ಟ್ 15ರ ಅವಧಿಯಲ್ಲಿ ತೈಲ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಸತತ 85ದಿನಗಳ ಕಾಲ (ಮಾರ್ಚ್ 17 ರಿಂದ ಜೂನ್ 6 ಸೇರಿಸಿ) ವಾಹನ ಸವಾರರ ಹಿತ ಕಾಯಲಾಗಿತ್ತು

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Bakkaprabhu Uppar
Top