Sunday, 13 May, 2.02 am ಬಾಲ್ಕನಿ ನ್ಯೂಸ್

ಆರೋಗ್ಯ
ದೇಹಕ್ಕೆ ಅತ್ಯಧಿಕ ಕ್ಯಾಲ್ಸಿಯಂ ನೀಡುವ ಆಹಾರಗಳು !

ಸಾಮಾನ್ಯವಾಗಿ ಕ್ಯಾಲ್ಸಿಯಂ ಖನಿಜ ದೇಹಕ್ಕೆ ಬೇಕೆ ಬೇಕು. ಇದು ಮೂಳೆಗಳನ್ನು ದೃಢವಾಗಿ ಇಡುತ್ತದೆ. ವಯಸ್ಸಾದಂತೆ ಮೂಳೆಗಳ ಸವೆತ ಉಂಟಾಗುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಅಧಿಕ. ಹಾಗಿದ್ದರೆ ಕ್ಯಾಲ್ಸಿಯಂ ಹೆಚ್ಚಾಗಿರುವ ಆಹಾರ ಯಾವುದು? ಎಂಬುದನ್ನು ತಿಳಿದುಕೊಳ್ಳೋಣ.

ವಯಸ್ಸು 30 ದಾಟುತ್ತಿದ್ದಂತೆ ಹೆಚ್ಚಿನ ಮಹಿಳೆಯರಲ್ಲಿ ಮೂಳೆ ಸವೆತದ ಸಮಸ್ಯೆ ಕಂಡು ಬರುತ್ತದೆ. ಮೈಯಲ್ಲಿ ಶಕ್ತಿ ಕುಂದುವುದು, ಮಂಡಿ ನೋವು, ಕೈ ಬೆರಳುಗಳಲ್ಲಿ ನೋವು, ಸ್ನಾಯು ಸೆಳೆತ ಈ ರೀತಿಯ ಸಮಸ್ಯೆಗಳು ಕಾಡುತ್ತಿದ್ದರೆ ಅವು ಮೂಳೆ ಸವೆತದ ಲಕ್ಷಣಗಳಿರಬಹುದು.

ಸಾಮಾನ್ಯವಾಗಿ ಮೂಳೆ ಸವೆತ ಕ್ಯಾಲ್ಸಿಯಂ ಹಾಗೂ ವಿಟಮಿನ್‌ ಡಿ ಕೊರತೆಯಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಿಗೆ ಪ್ರತಿದಿನ 700mg ಕ್ಯಾಲ್ಸಿಯಂ ಅವಶ್ಯಕ. ಆದ್ದರಿಂದ ಕ್ಯಾಲ್ಸಿಯಂ ಅಧಿಕವಿರುವ ಆಹಾರಗಳನ್ನು ಡಯಟ್‌ ನಲ್ಲಿ ಸೇರಿಸುವುದು ಒಳ್ಳೆಯದು.

ಕ್ಯಾಲ್ಸಿಯಂ ಅಧಿಕವಿರುವ ಆಹಾರಗಳು

ಹಾಲು

ಹಾಲಿನ ಉತ್ಪನ್ನಗಳು

ಸೊಪ್ಪು

ಎಲೆಕೋಸು

ಬೆಂಡೆಕಾಯಿ

ಬ್ರೊಕೋಲಿ

ಸೋಯಾ ಉತ್ಪನ್ನಗಳು

ನಟ್ಸ್‌

ಮೀನು

ಬೀನ್ಸ್

ವಿಟಮಿನ್ ಡಿ

ಈಗೀನ ಜೀವನಶೈಲಿಯಲ್ಲಿ ಎಷ್ಟೋ ಜನರು ಬಿಸಿಲಿಗೆ ಹೋಗುವುದನ್ನೇ ಮರೆತ್ತಿದ್ದಾರೆ. ವಿಟಮಿನ್‌ ಡಿ ಕೊರತೆ ಉಂಟಾಗದಿರಲು ಬೆಳಗ್ಗೆ 5-10 ನಿಮಿಷ ಬಿಸಿಲಿನಲ್ಲಿ ನಿಲ್ಲಿ(ಬೆಳಗ್ಗೆ 8 ಗಂಟೆಯೊಳಗೆ ನಿಲ್ಲಿ).

ವಿಟಮಿನ್ ಡಿ ಇರುವ ಆಹಾರಗಳು

ಅಣಬೆ

ಮೊಟ್ಟೆ

ಮೀನು

ಧಾನ್ಯಗಳು

ವಿಟಮಿನ್‌ ಡಿಯ ತುಂಬಾ ಕೊರತೆ ಇರುವವರು ವೈದ್ಯರ ಸಲಹೆ ಮೇರೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Balkani News
Top