Monday, 21 Sep, 12.00 pm ಬಾಲ್ಕನಿ ನ್ಯೂಸ್

ಸುದ್ದಿಗಳು
'ಕಸ್ತೂರಿ ಮಹಲ್' ಚಿತ್ರದಿಂದ ಹೊರನಡೆದ ರಚಿತಾ, ಕಾರಣ ಏನು ?!

'ಕಸ್ತೂರಿ ನಿವಾಸ'ದಿಂದ 'ಕಸ್ತೂರಿ ಮಹಲ್' ಎಂದು ಟೈಟಲ್ ಬದಲಾವಣೆ ಮಾಡಿಕೊಂಡು ಶೂಟಿಂಗ್ ಗೆ ಚಿತ್ರತಂಡ ಸಿದ್ಧತೆ ನಡೆಸಿದ್ದು ಈಗ ಸಿನಿಮಾದಲ್ಲಿ ಧಿಡೀರ್ ಬದಲಾವಣೆ ಉಂಟಾಗಿದೆ. ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ ದಿನೇಶ್ ಬಾಬು ಅವರ 50ನೇ ಸಿನಿಮಾ ಇದಾಗಿದ್ದು, ರಚಿತಾ ರಾಮ್‌, ಸ್ಕಂದ ಅಶೋಕ್, ಶ್ರುತಿ ಪ್ರಕಾಶ್ ಪ್ರಮುಖ ಪಾತ್ರದಲ್ಲಿದ್ದರು. ಆದರೆ ಈಗ ಈ ಸಿನಿಮಾದಿಂದ ನಟಿ ರಚಿತಾ ರಾಮ್‌ ಹೊರನಡೆದಿದ್ದಾರೆ!

ಸಿನಿಮಾ ಲಾಂಚ್‌ ವೇಳೆ ರಚಿತಾ ರಾಮ್‌ ಈ ಸಿನಿಮಾದ ಕುರಿತು ಬಹಳ ಪ್ರೀತಿಯಿಂದಲೇ ಸಂತೋಷದಿಂದಲೇ ಮಾತನಾಡಿದ್ದರು ಆದರೆ ಈಗ ಡೇಟ್ ಸಮಸ್ಸೆಯಿಂದ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಮಾಹಿತಿ ಬಂದಿದೆ. ಅಕ್ಟೋಬರ್ 5ರಿಂದ ಸಿನಿಮಾದ ಶೂಟಿಂಗ್ ಮಾಡಬೇಕು ಎಂದು ದಿನೇಶ್ ಬಾಬು ಯೋಜನೆ ಮಾಡಿಕೊಂಡಿದ್ದರು. ಆದರೆ, ರಚಿತಾ ಸಿಕ್ಕಾಪಟ್ಟೆ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದು ಈ ಸಿನಿಮಾಗೆ ಡೇಟ್ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ! ಹಾಗಾಗಿ ಅವರು ಹೊರನಡೆದಿದ್ದಾರೆ ಎನ್ನಲಾಗುತ್ತಿದೆ‌.

ಅ.05 ರಿಂದ ಶೂಟಿಂಗ್ ಪ್ರಾರಂಭಿಸಬೇಕು ಎಂದು ಕೊಂಡಿದ್ದ ನಿರ್ದೇಶಕರಿಗೆ ಅಷ್ಟರಲ್ಲಿ ರಚಿತಾ ರಾಮ್ ಜಾಗಕ್ಕೆ ಯಾವ ನಟಿಯನ್ನು ಆಯ್ಕೆಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ಚಿತ್ರತಂಡ ಈಗ ಹೊಸ ನಾಯಕಿಯ ಆಯ್ಕೆಯಲ್ಲಿದೆ. ಮೊದಲು ಸಿನಿಮಾ ಶೀರ್ಷಿಕೆಗೆ ಸಮಸ್ಯೆಯಾಗಿದ್ದು, ಈಗ ನಾಯಕಿ ಜಾಗಕ್ಕೆ ಹೀಗಾಗಿರುವುದು ಅಭಿಮಾನಿಗಳಿಗೆ ಬೇಸರದ ವಿಷಯವಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Balkani News
Top