Thursday, 29 Oct, 6.00 pm ಬಾಲ್ಕನಿ ನ್ಯೂಸ್

ಸುದ್ದಿಗಳು
ಶಾರುಖ್ ನಿರ್ಮಾಣದಲ್ಲಿ ಲವ್ ಹಾಸ್ಟೆಲ್.

ಬಾಲಿವುಡ್ ಬಾದಷಾ ಕಿಂಗ್ ಖಾನ್ ಸಿನಿಮಾ ಮಾಡಿ ಹೆಚ್ಚು ಎರಡು ವರ್ಷಗಳೇ ಕಳೆದಿವೆ. ಅವರ ಮುಂದಿನ ಚಿತ್ರಗಳನ್ನು ರಾಜು ಹಿರಾನಿ, ಅಟ್ಲೀ ಹಾಗು ಸಿದ್ದಾರ್ಥ್ ಆನಂದ್ ಮಾಡುತ್ತಾರೆ ಎಂಬ ಸುದ್ದಿ ಬರುತ್ತಲೇ ಇದೆ. ಆನಂದ್ ಎಲ್ ರೈ ರವರ ಝೀರೋ ಬಳಿಕ ಯಾವ ಸಿನಿಮಾದಲ್ಲೂ ಶಾರುಖ್ ನಟಿಸಿಲ್ಲ.

ಈಗ ಶಾರುಖ್ ಹೊಸ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಾರುಖ್ ರ ರೆಡ್ ಚಿಲಿಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಲವ್ ಹಾಸ್ಟೆಲ್ ಎಂಬ ಥ್ರಿಲ್ಲರ್ ಚಿತ್ರವೊಂದು ಬರುತ್ತಿದೆ. ಈ ಚಿತ್ರವನ್ನು ಶಂಕರ್ ರಾಮನ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಗೌರಿ ಖಾನ್, ಮನೀಶ್ ಮುಂದ್ರ ಹಾಗು ಗೌರವ್ ವರ್ಮ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ಎಂದು ಸಿನಿಮಾ ತಂಡ ಹೇಳಿದೆ. ಈ ಚಿತ್ರದಲ್ಲಿ ವಿಕ್ರಾಂತ್ ಮಾಸೇ, ಸಾನಿಯಾ ಮಲ್ಹೋತ್ರ ಮತ್ತು ಬಾಬಿ ಡಿಯೋಲ್ ಅಭಿನಯ ಮಾಡುತ್ತಿದ್ದಾರೆ. ೨೦೨೧ ಕ್ಕೆ ಈ ಸಿನಿಮಾ ಸೆಟ್ಟೇರುತ್ತಿದ್ದು, ಅದೇ ವರ್ಷದಲ್ಲಿ ಬಿಡುಗಡೆಯಾಗುತ್ತಿದೆ. ಶಾರುಖ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಯಾವಾಗ ಬರುತ್ತದೆ ಎಂದು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Balkani News
Top