Tuesday, 31 Dec, 12.00 pm ಬಾಲ್ಕನಿ ನ್ಯೂಸ್

ಸುದ್ದಿಗಳು
ವಿನೂತನ ಪ್ರಮೋಶನ್ ಮೂಲಕ ಗಮನ ಸೆಳೆದ 'ಜಂಟಲ್ ಮೆನ್'

ಗುರು ದೇಶಪಾಂಡೆ ನಿರ್ಮಾಣದ 'ಜಂಟಲ್ ಮೆನ್' ಚಿತ್ರವು ಸಾಕಷ್ಟು ಕುತೂಹಲ ಮೂಡಿಸಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವು ಮೂರು ಹೊತ್ತು ನಿದ್ರೆ ಮಾಡುವ ಕುಂಭಕರ್ಣನ ಕಥೆಯನ್ನು ಒಳಗೊಂಡಿದ್ದು, ಚಿತ್ರತಂಡದವರು ಇದೀಗ ಇದೇ ವಿಚಾರವನ್ನು ಇಟ್ಟುಕೊಂಡು, ವಿನೂತನ ಪ್ರಮೋಶನ್ ಮೂಲಕ ಚಿತ್ರ ಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ.

ನಿದ್ರೆ, ಕನಸು, ನನಸು.. ಈ ವಿಷಯಗಳ ಬಗ್ಗೆ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈ ಲಿಸ್ಟ್ ನಲ್ಲಿ ಹೊಸದಾಗಿ ಸೇರುವ ಸಿನಿಮಾವೆಂದರೆ ಅದು 'ಜೆಂಟಲ್ ಮೆನ್'. ಇಲ್ಲಿ ಕಥಾನಾಯಕ ದಿನದ 24 ಗಂಟೆಯಲ್ಲಿ 18 ತಾಸು ಮಲಗಿ ಬರೀ 6 ತಾಸು ಎಚ್ಚರವಿರುತ್ತಾನೆ. ಈ 6 ಗಂಟೆಗಳಲ್ಲಿ ಆತ ಏನು ಮಾಡುತ್ತಾನೆ, ತನ್ನವರಿಗಾಗಿ ಆತ ಎಷ್ಟು ಗಂಟೆ ಮೀಸಲಿಡುತ್ತಾನೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಸದ್ಯ ಈ ನಿದ್ದೆಯ ವಿಚಾರಗಳನ್ನು ಇಟ್ಟುಕೊಂಡ 'ಜಂಟಲ್ ಮೆನ್' ಸಿನಿಮಾ ಮೀಮ್ಸ್, ಟ್ರೋಲ್ ಮತ್ತು ಕಾರ್ಟೂನ್ ಗಳಲ್ಲಿ ಆವರಿಸಿಕೊಂಡಿದೆ. ಒಂದೊಂದು ಪ್ರಕಾರದಲ್ಲೂ ಪ್ರಜ್ವಲ್ ರವರ ಫೋಟೋಗಳನ್ನು ಬಳಸಿಕೊಂಡು, ವಿಭಿನ್ನ ಸಾಲುಗಳ ಮೂಲಕ ಚಿತ್ರದ ಪೋಸ್ಟರ್ ಗಳು ಗಮನ ಸೆಳೆಯುತ್ತಿವೆ. ಈ ಮೂಲಕ ಚಿತ್ರದ ಕಥೆ ವಿಭಿನ್ನವಾಗಿದೆ ಎನ್ನುವುದು ತಿಳಿಯುತ್ತಿದೆ.

ಇನ್ನು ಜಗತ್ತಿನಲ್ಲಿಯೇ ಕೆಲವೇ ಕೆಲವರನ್ನು ಭಾದಿಸುವ ಸ್ಲೀಪಿಂಗ್ ಸಿಂಡ್ರೋಮ್ ಖಾಯಿಲೆ ಪೀಡಿತ ಯುವಕನ ಪಾತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಕಥಾನಾಯಕನು ಸಮಾಜದಲ್ಲಿ 'ಜಂಟಲ್ ಮೆನ್' ಆಗಲು ಹೇಗೆ ಪ್ರಯತ್ನ ಪಡುತ್ತಾನೆ ಎನ್ನುವುದು ಚಿತ್ರದ ಕಥೆ. ಇನ್ನು ಚಿತ್ರಕ್ಕೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಈ ಚಿತ್ರವನ್ನು 'ರಾಜಹಂಸ' ಖ್ಯಾತಿಯ ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ 'ಕುಂಭಕರ್ಣ'ಎಂಬ ಟ್ಯಾಗ್ ಲೈನ್ ಇದೆ. ಜನೇವರಿ ಮೂರನೇ ವಾರಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Balkani News
Top