ಹೋಂ
ಬೆಂಗಳೂರು: 120 ಆಯಂಬುಲೆನ್ಸ್ಗಳಿಗೆ ಚಾಲನೆ ನೀಡಿದ ಸಿಎಂ!
ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) 120, 108 ಆಯಂಬುಲೆನ್ಸ್ಗಳಿಗೆ (Ambulance) ಚಾಲನೆ ನೀಡಿದ್ದಾರೆ. ಆಯಂಬುಲೆನ್ಸ್ಗಳ ಲೋಕಸರ್ಪಣೆ ಮಾಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಆರೋಗ್ಯಕ್ಕೆ ಮುಖ್ಯ ಜೀವನಾಡಿ ಆಯಂಬುಲೆನ್ಸ್. ಆರೋಗ್ಯ ಯಾವಾಗ ಕೈ ಕೊಡುತ್ತದೆ ಎಂದು ಗೊತ್ತಾಗಲ್ಲ. ಬೆಳಿಗ್ಗೆ ಚೆನ್ನಾಗಿ ಇರುತ್ತೀವಿ, ರಾತ್ರಿ ಏನಾಗುತ್ತೋ ಗೊತ್ತಿಲ್ಲ. ಇಂಥ ಸಮಯದಲ್ಲಿ ಆಯಂಬುಲೆನ್ಸ್ ಮುಖ್ಯ ಎಂದು ತಿಳಿಸಿದರು.
ಆಯಂಬುಲೆನ್ಸ್ಗಳು ಕೇವಲ ಸಾಗಾಣಿಕೆ ವಾಹನ ಆಗದೇ ಎಮರ್ಜೆನ್ಸಿ ಟ್ರೀಟ್ಮೆಂಟ್ ಕೊಡುವ ಹಾಗೇ ಇರಬೇಕು. ಕರೆ ಮಾಡಿದ ಕೂಡಲೇ ಕರ್ತವ್ಯ ನಿರ್ವಹಿಸಬೇಕು. ರಾಮುಲು ಆಗ ಈ ಕೆಲಸ ಪ್ರಾರಂಭ ಮಾಡಿದರು. ಅಂದು ಅಬ್ದುಲ್ ಕಲಾಂ ಉದ್ಘಾಟನೆ ಮಾಡಿದರು. 108 ಹೆಸರು ಯಾಕೆ ಇಟ್ರೋ ಗೊತ್ತಿಲ್ಲ. 108 ಸಮಸ್ಯೆಗೆ 108 ಆಂಬುಲೆನ್ಸ್ ಸೇವೆ ಪರಿಹಾರ ಅನ್ನಿಸುತ್ತೆ. ಆರೋಗ್ಯದ ತೊಂದರೆ ಆದರೆ 108ಕ್ಕೆ ಕರೆ ಮಾಡು ಅಂತ ಹಳ್ಳಿ ಕಡೆ ಅಂತಾರೆ. ಇಂತ ಸೇವೆ ವಿಸ್ತರಣೆ ಆಗಬೇಕು ಅನ್ನೋದು ಆರೋಗ್ಯ ಸಚಿವರ ಆಶಯ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಕೆನಡಾ ಚುನಾವಣೆ: ಪ್ರಧಾನಿ ಟ್ರುಡೋಗೆ ಹಿನ್ನಡೆ ಸಾಧ್ಯತೆ!
ಸುಧಾಕರ್ ಕಾಲೆಳೆದ ಬೊಮ್ಮಾಯಿ
ಆರೋಗ್ಯ ಸಚಿವರು ಡಾಕ್ಟರ್ ಆಗಿದ್ದರಿಂದ ಆರೋಗ್ಯ ಕ್ಷೇತ್ರಕ್ಕೆ ಬೇಕಿರುವುದನ್ನ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ ಬೊಮ್ಮಾಯಿ, ಅವರು ಬಹಳ ಬುದ್ದಿವಂತರು ಇದ್ದಾರೆ. ಬಹಳ ಬುದ್ದಿವಂತರಾದರೂ ನಮಗೆ ಸಮಸ್ಯೆನೇ ಅಂತ ಸಚಿವ ಸುಧಾಕರ್ರವರ ಕಾಲೆಳೆದು ಮಾತನಾಡಿದರು.
ಕೊರೊನಾ ನಮ್ಮ ಕಣ್ಣು ತೆರೆಸಿದೆ. ಕೊರೊನಾ ಬಳಿಕ ಆರೋಗ್ಯ ಎಷ್ಟು ಮುಖ್ಯ ಎಂದು ಗೊತ್ತಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಸಮಸ್ಯೆ ಇದೆ. ಕೊರೊನಾ ಮೊದಲನೇ ಹಾಗೂ ಎರಡನೇ ಅಲೆ ಎದುರಿಸಿದ್ದೇವೆ. ಮೊದಲನೇ ಅಲೆಯಲ್ಲಿ ಯಾವ ರೀತಿ ಇತ್ತು ಎಂದು ಗೊತ್ತಿದೆ. ಆಗ ಸೋಂಕಿತರನ್ನು ರಿಜಿಸ್ಟರ್ ಮಾಡೋದು ಗೊತ್ತಿರಲಿಲ್ಲ. ಆದರೆ ನಮ್ಮ ಆರೋಗ್ಯ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ. ನನ್ನ ಪ್ರಕಾರ 108 ಌಂಬುಲೆನ್ಸ್ ಇನ್ನೂ ಸುಧಾರಿಸಬೇಕಿದೆ. ಜಿಪಿಎಸ್, ಎಲ್ಲ ಪ್ರದೇಶಗಳೂ ಸಂಪರ್ಕಿಸುವಂತಾಗಬೇಕು ಎಂದು
ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, 710 ಌಂಬುಲೆನ್ಸ್ ಈಗಾಗಲೇ ಇವೆ. ಇದರ ಜೊತೆಗೆ 120 ಌಂಬುಲೆನ್ಸ್ ಸೇರ್ಪಡೆ ಆಗುತ್ತಿವೆ. ಅಡ್ವಾನ್ಸ್ ಲೈಫ್ ಸಿಸ್ಟಮ್ಗಳಿರುವ ಌಂಬುಲೆನ್ಸ್ ಇವಾಗಿವೆ. ಆರೋಗ್ಯ ಸೇವೆ ಎಷ್ಟು ಮುಖ್ಯ ಅನ್ನೋದು ಗೊತ್ತಿದೆ. ರೋಗಿಗೆ ಹತ್ತಿರದ ಸೂಕ್ತ ಆಸ್ಪತ್ರೆಗೆ ಸೇರಿಸಬೇಕು ಅನ್ನೋದನ್ನ ಕಮಾಂಡ್ ರೂಂ ನಿಂದ ಸೂಚನೆ ನೀಡಲಾಗುತ್ತದೆ. ಜಿಪಿಎಸ್ ಅಳವಡಿಕೆ ಕೂಡ ಆಗುತ್ತದೆ. ನಗರ ಪ್ರದೇಶದಲ್ಲಿ ಌಂಬುಲೆನ್ಸ್ ತಲುಪಲು 30-45 ನಿಮಿಷ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ 45 ನಿಮಿಷ ಆಗುತ್ತಿದೆ. ಒಂದು ಲಕ್ಷ ಜನರಿಗೆ ಒಂದು ಌಂಬುಲೆನ್ಸ್ ಅಂತ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಇದನ್ನೂ ಹೆಚ್ಚು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ 400 ಆಂಬುಲೆನ್ಸ್ ಲೋಕಾರ್ಪಣೆ ಮಾಡಲು ಚಿಂತನೆ ಮಾಡಿದ್ದೇವೆ ಎಂದು ತಿಳಿಸಿದರು.
ಲಸಿಕೆ ನೀಡುವಲ್ಲಿಯೂ ನಾವು ಮುಂದೆ ಇದ್ದೇವೆ. 3.8 ಲಕ್ಷ ಪ್ರತಿನಿತ್ಯ ಲಸಿಕೆ ನೀಡಲಾಗುತ್ತಿದೆ. ನಾವು ಇಡೀ ದೇಶದಲ್ಲಿ ಲಸಿಕೆ ಹಂಚಿಕೆಯಲ್ಲಿ ನಾಲ್ಕು-ಐದನೇ ಸ್ಥಾನದಲ್ಲಿದ್ದೇವೆ. ಎಲ್ಲಾ ಹಂತದ ಸೇವೆ ಜನ ಸಾಮಾನ್ಯರಿಗೆ ಉಚಿತವಾಗಿ ಸಿಗಬೇಕು. ಇದರ ಭಾಗವಾಗಿ ಇಂದು ಌಂಬುಲೆನ್ಸ್ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.
Post navigation
ಕೆನಡಾ ಚುನಾವಣೆ: ಪ್ರಧಾನಿ ಟ್ರುಡೋಗೆ ಹಿನ್ನಡೆ ಸಾಧ್ಯತೆ! ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಲು ಕಾರಣ ಏನು? ಇದರ ಲಕ್ಷಣಗಳನ್ನು ಗುರುತಿಸುವುದು ಹೇಗೆ?related stories
-
Breaking Karnataka ನಾಟಕ, ನೃತ್ಯ ಶಿಕ್ಷಕರ ಸಂಘ ಅಸ್ತಿತ್ವಕ್ಕೆ
-
Breaking Karnataka ರಾಜ್ಯದಲ್ಲಿ ನಾಳೆಯಿಂದ ಮಳೆ ತಗ್ಗುವ ಸಾಧ್ಯತೆ: 5 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
-
Breaking Karnataka ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಹಿನ್ನಡೆ ಆಗಿಲ್ಲ: ಬಸವಲಿಂಗ ಪಟ್ಟದೇವರು