Dailyhunt
ಬೆಂಗಳೂರು : ಲಕ್ಷಗಟ್ಟಲೆ ಹಣ ವಂಚನೆ ಮಾಡಿದ ಇಕ್ರಾ ಕಂಪನಿ; ನಾಲ್ವರು ಅರೆಸ್ಟ್ !

ಬೆಂಗಳೂರು : ಲಕ್ಷಗಟ್ಟಲೆ ಹಣ ವಂಚನೆ ಮಾಡಿದ ಇಕ್ರಾ ಕಂಪನಿ; ನಾಲ್ವರು ಅರೆಸ್ಟ್ !

ಬೆಂಗಳೂರು : ಅಧಿಕ ಲಾಭದ ಆಮಿಷ ಒಡ್ಡಿ ಜನರಿಂದ ಲಕ್ಷಗಟ್ಟಲೆ ಹಣವನ್ನು ಪಡೆದು ವಂಚನೆ ನಡೆಸಿದ ಅನೇಕ ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ.

ಆದರೂ ಕೂಡ ಜನರು ಮೋಸ ಹೋಗುವುದು ನಿಂತಿಲ್ಲ. ವಂಚನೆ ಕಂಪನಿಗಳಿಗೆ ಕಡಿವಾಣ ಬಿದ್ದಿಲ್ಲ.

ನಗರದಲ್ಲಿ ಇಂಥ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತಿಲಕ್​ನಗರದ ಸ್ವಾಗತ್ ರಸ್ತೆಯಲ್ಲಿರುವ ಇಕ್ರಾ (IQRA) ಕಂಪನಿಯಿಂದ ಹಲವರಿಗೆ ವಂಚನೆ ಆಗಿರುವುದು ತಿಳಿದುಬಂದಿದೆ. ಇಕ್ರಾ ಕಂಪನಿ 4 ಕೋಟಿಯಷ್ಟು ಹಣವನ್ನು ಲಪಟಾಯಿಸಿದೆ ಎಂದು ಸಾರ್ವಜನಿಕರು ದೂರು ನೀಡಿದ್ಧಾರೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆರೋಪಿಗಳಾದ ಅಬ್ದುಲ್ ನಾಜೀಮ್ ಮೇಖ್ರಿ, ನಯೀಮ್ ಮೇಖ್ರಿ, ಹಿದಾಯತ್-ಉಲ್ಲಾ, ಅಲೀಂ ಮೇಖ್ರಿ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಬಡ್ಸ್ ಆಯಕ್ಟ್-219ರ ಸೆಕ್ಷನ್ 21, ಕೆಪಿಐಡಿ ಕ ಆಯ್ದೆಯ ಸೆಕ್ಷನ್ 9 ಹಾಗೂ ಐಪಿಸಿ ಸೆಕ್ಷನ್ 506, 420 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತದಿಂದ ಯುಎಇ ಪ್ರಯಾಣಕ್ಕೆ ಸೆ.12ರಿಂದ ಅವಕಾಶ - ಷರತ್ತುಬದ್ಧ ನಿಯಮ ಅನ್ವಯ..!

ಸೈಯದ್ ಗುಲಾಬ್ ಎಂಬುವವರು ದೂರು ಕೊಟ್ಟಿದ್ದರು. ಅದಾದ ಬಳಿಕ ತಿಲಕ್ ನಗರ ಠಾಣೆ ಪೊಲೀಸರು ಸಿಆರ್​ಪಿಸಿ ಸೆಕ್ಷನ್ 91ರ ಅಡಿಯಲ್ಲಿ ಪಬ್ಲಿಕ್ ನೋಟೀಸ್ ಹೊರಡಿಸಿದರು. ಇಕ್ರಾ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ವಂಚನೆಗೊಳಗಾದವರು ಠಾಣೆಗೆ ಬಂದು ಮಾಹಿತಿ ಕೊಡುವಂತೆ ನೋಟೀಸ್​ನಲ್ಲಿ ಮನವಿ ಮಾಡಲಾಯಿತು. ಪೊಲೀಸ್ ಪ್ರಕಟಣೆ ಬಳಿಕ 24ಕ್ಕೂ ಹೆಚ್ಚು ಜನರು ದೂರು ನೀಡಲು ಮುಂದೆ ಬಂದರು. ಸದ್ಯ ಇರುವ ಮಾಹಿತಿ ಪ್ರಕಾರ 2020ರಿಂದಲೂ 40ಕ್ಕೂ ಹೆಚ್ಚು ಜನರು ಇಕ್ರಾ ಕಂಪನಿಗೆ ಹಣ ಕೊಟ್ಟಿದ್ದಾರೆ. ಒಬ್ಬೊಬ್ಬರಿಂದಲೂ 4-10 ಲಕ್ಷದವರೆಗೂ ಹಣ ಪಡೆಯಲಾಗಿದೆ. ತಿಲಕ್ ನಗರದ ನಿವಾಸಿಯೊಬ್ಬರು 10 ಲಕ್ಷ ಹಣ ಕಳೆದುಕೊಂಡಿದ್ಧಾರೆ. ಮಹಾರಾಷ್ಟ್ರದ ನಾಗಪುರ ಮೂಲದ ಐದಾರು ಮಂದಿಗೆ ಲಕ್ಷಾಂತರ ರೂ ವಂಚನೆಯಾಗಿರುವುದು ತಿಳಿದುಬಂದಿದೆ. ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ಧಾರೆ.

Post navigation

ಭಾರತದಿಂದ ಯುಎಇ ಪ್ರಯಾಣಕ್ಕೆ ಸೆ.12ರಿಂದ ಅವಕಾಶ - ಷರತ್ತುಬದ್ಧ ನಿಯಮ ಅನ್ವಯ..! ವಿಜಯಪುರ ನಗರದಲ್ಲಿ ಮತ್ತೆ ಭೂ ಕಂಪನದ ಅನುಭವ..!
Dailyhunt
Disclaimer: This content has not been generated, created or edited by Dailyhunt. Publisher: BC Suddi