Sunday, 12 Sep, 6.13 pm ಬಿಸಿ ಸುದ್ದಿ

ಹೋಂ
ಭೂಪೇಂದ್ರ ಭಾಯಿ ಪಟೇಲ್ ಗುಜರಾತ್‌ನ ಹೊಸ ಮುಖ್ಯಮಂತ್ರಿ!

ಗಾಂಧಿನಗರ : ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಅಹಮದಾಬಾದ್​ನ ಘಟಲೋದಿಯ ಕ್ಷೇತ್ರದ ಶಾಸಕರಾದ ಭೂಪೇಂದ್ರಭಾಯಿ ಪಟೇಲ್​ ಅವರನ್ನು ಆಯ್ಕೆ ಮಾಡಲಾಗಿದೆ.

ಭಾನುವಾರ ಗಾಂಧಿನಗರದ ಬಿಜೆಪಿ ಕಾರ್ಯಾಲಯ ಕಮಲಂನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶಾಸಕಾಂಗ ಸಭೆಯಲ್ಲಿ ಸರ್ವ ಶಾಸಕರ ಒಮ್ಮತದಿಂದ ಭೂಪೇಂದ್ರ ಪಟೇಲ್‌ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ನರೇಂದ್ರ ತೋಮರ್‌ ತಿಳಿಸಿದ್ದಾರೆ.

ಶನಿವಾರ ನಿಕಟಪೂರ್ವ ಸಿಎಂ ವಿಜಯ್‌ ರೂಪಾಣಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು.

2017 ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್‌ ಪಕ್ಷದ ಶಶಿಕಾಂತ್‌ ಪಟೇಲ್‌ ವಿರುದ್ದ 1,17,000 ಮತಗಳ ಅಂತರದಲ್ಲಿ ಗೆದ್ದಿದ್ದರು.

ಡಿಸೆಂಬರ್​ 2022ಕ್ಕೆ ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯು ನಡೆಯಲಿದ್ದು, ನೂತನ ಸಿಎಂ ಪಟೇಲ್​ ಅವರಿಗೆ 15 ತಿಂಗಳು ಅಧಿಕಾರ ನಡೆಸುವ ಅವಕಾಶವಿದೆ.

Post navigation

ಭದ್ರಾವತಿ : 150 ನಾಯಿಗಳನ್ನು ಜೀವಂತವಾಗಿ ಹೂತ ದುರುಳರು: 12 ಜನರ ಬಂಧನ..! ಮನೆಗಳ ಅಕ್ರಮ-ಸಕ್ರಮದ ಬಗ್ಗೆ ಸಿಎಂ ಹೇಳಿದ್ದು ಇದು.!
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: BC Suddi
Top