Dailyhunt Logo
  • Light mode
    Follow system
    Dark mode
    • Play Story
    • App Story
ಡಾ.ಕಂಠೀರವ ಬಾಲಸರಸ್ವತಿ ಅವರ ನುಡಿ-ನಮನ

ಡಾ.ಕಂಠೀರವ ಬಾಲಸರಸ್ವತಿ ಅವರ ನುಡಿ-ನಮನ

ಚಿತ್ರದುರ್ಗ : ಬಹಳ ವರ್ಷಗಳ ಕಾಲ ಅಮೇರಿಕಾದಲ್ಲಿ ಸೇವೆ ಸಲ್ಲಿಸಿದ ಡಾ.ಕಂಠೀರವ ಬಾಲಸರಸ್ವತಿಯವರು ಭಾರತಕ್ಕೆ ಮರಳಿ ಅನೇಕ ಹೊಸ ಮೆಡಿಕಲ್ ಕಾಲೇಜುಗಳಲ್ಲಿ ಸೂಕ್ತ ಸಲಹೆ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆಂದು ರೆಡ್ಡಿ ಜನಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಸ್ಮರಿಸಿದರು.

ಕಳೆದ 9 ರಂದು ನಿಧನರಾದ ಡಾ.ಕಂಠೀರವ ಬಾಲಸರಸ್ವತಿರವರಿಗೆ ಕುಟುಂಬ ವರ್ಗದವರು ತುರುವನೂರು ರಸ್ತೆಯಲ್ಲಿರುವ ರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ನನಗೂ ಅವರಿಗೂ ಅರವತ್ತು ವರ್ಷಗಳ ಪರಿಚಯವಿದೆ. ಹಿರಿಯೂರು ತಾಲ್ಲೂಕು ಕುಗ್ರಾಮ ಬಸಪ್ಪನಮಾಳಿಗೆಯಲ್ಲಿ ಜನಿಸಿದ ಡಾ.ಕಂಠೀರವ ಬಾಲಸರಸ್ವತಿರವರು ಮರಡಿಹಳ್ಳಿಯಲ್ಲಿ ಶಿಕ್ಷಣ ಪಡೆದು ನಂತರ ಬೇರೆ ಬೇರೆ ಕಡೆ ವಿದ್ಯಾಭ್ಯಾಸ ಮಾಡಿ ವೈದ್ಯರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದರು. ರೆಡ್ಡಿ ಜನಸಂಘದ ಸದಸ್ಯರಾಗಿ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಿದ್ದರು. ಅವರ ನಿಧನದಿಂದ ಸಂಘಕ್ಕೆ ಅಪಾರ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

ಡಾ.ಕಂಠೀರವ ಬಾಲಸರಸ್ವತಿರವರ ಜೊತೆ ಸಾಕಷ್ಟು ಬಾರಿ ಚರ್ಚೆ ನಡೆಸಿದ್ದೇನೆ. ಅವರು ನೀಡಿದ ಸಲಹೆಗಳನ್ನು ಪಾಲಿಸುತ್ತೇವೆ. ಐಮಂಗಲ ಭಾಗದಲ್ಲಿ ಸಾಕಷ್ಟು ಸೇವೆ

ಸಲ್ಲಿಸಿದ ಮೃತರು ಅನೇಕ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಚರ್ಮ ತಜ್ಞ ಡಾ.ಆನಂದಪ್ಪ ಮಾತನಾಡಿ ಡಾ.ಕಂಠೀರವ ಬಾಲಸರಸ್ವತಿರವರು ವೈದ್ಯರಾಗಿ ಅಪಾರ ಸೇವೆ ಸಲ್ಲಿಸಿ ವೈದ್ಯಕೀಯ ಲೋಕದ ಬ್ರಹ್ಮ ಎನಿಸಿಕೊಂಡವರು. ಅವರೊಬ್ಬ ಕೇವಲ ವೈದ್ಯರಾಗಿರಲಿಲ್ಲ. ಶಕ್ತಿಯಾಗಿದ್ದರು. ವೃತ್ತಿ ಜೀವನದಲ್ಲಿ ಯಾರಿಗೂ ತೊಂದರೆ ಕೊಟ್ಟವರಲ್ಲ ಎಂದು ಗುಣಗಾನ ಮಾಡಿದರು.

ಬಸವೇಶ್ವರ ಆಸ್ಪತ್ರೆಯ ಡಾ.ರಾಜೇಶ್ ಇನ್ನು ಅನೇಕು ನುಡಿನಮನದಲ್ಲಿ ಮಾತನಾಡಿದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ರಘುರಾಮರೆಡ್ಡಿ, ಡಾ.ಕಂಠೀರವ ಬಾಲಸರಸ್ವತಿರವರ ಪತ್ನಿ, ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು

ಬಂಧು ಬಾಂಧವರು, ಅಪಾರ ವೈದ್ಯರುಗಳು, ರೆಡ್ಡಿ ಜನಸಂಘದ ನಿರ್ದೇಶಕರುಗಳಾದ ಆರ್.ವಿ.ಮಾರುತೇಶ್ರೆಡ್ಡಿ, ರಾಮಕೃಷ್ಣರೆಡ್ಡಿ ಹಾಗೂ ಪದಾಧಿಕಾರಿಗಳು ನುಡಿನಮನದಲ್ಲಿ ಭಾಗವಹಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: BC Suddi