Dailyhunt
ದೇಶದಲ್ಲಿ ಗುರುವಾರ 41,806 ಜನರಿಗೆ ಕೊರೊನಾ ದೃಢ..!

ದೇಶದಲ್ಲಿ ಗುರುವಾರ 41,806 ಜನರಿಗೆ ಕೊರೊನಾ ದೃಢ..!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಇಂದು ಕೊಂಚ ಇಳಿಕೆಯಾಗಿದೆ. ನಿನ್ನೆ (ಗುರುವಾರ) 41,806 ಜನರಿಗೆ ಕೊರೊನಾ ದೃಢಪಟ್ಟಿತ್ತು. ಇಂದು 38,949 ಜನರಿಗೆ ಸೋಂಕು ತಗುಲಿದೆ.ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಗುರುವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 38,949 ಜನರಿಗೆ ಸೋಂಕು ದೃಢಪಟ್ಟಿದೆ.

ಇದೇ ಅವಧಿಯಲ್ಲಿ 542 ಮಂದಿ ಕೋವಿಡ್‌ಗೆ ಬಲಿಯಾಗಿದ್ದರೆ, 40,026 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಈವರೆಗೂ 3,10,26,829 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 3,01,83,876 ಜನ ಗುಣಮುಖರಾಗಿದ್ದು, 4,12,531 ಮಂದಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 4,30,422ಕ್ಕೆ ಕುಸಿದಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಈವರೆಗೂ ಒಟ್ಟಾರೆ 39,53,43,767 ಮಂದಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಸಂಪುಟ ಪುನಾರಚನೆ ಬಗ್ಗೆ ಯಾವುದೇ ರೀತಿಯ ಪ್ರಸ್ತಾಪ ನಮ್ಮ ಮುಂದೆ ಇಲ್ಲ: ಸಿಎಂ ಯಡಿಯೂರಪ್ಪ

Post navigation

ಜಮ್ಮುವಿನ ಸಾಂಬಾ ಮತ್ತು ಹೀರಾನಗರ ಪ್ರದೇಶದ ಬಳಿ ಕನಿಷ್ಠ ಎರಡು ಡ್ರೋನ್ ಗಳು ಪತ್ತೆ ಕೋವಿಡ್ ನಿಯಮಗಳನ್ನು ಮರೆತು ಹೀಗೆಯೇ ನಿರ್ಲಕ್ಷ್ಯ ತೋರಿದರೆ 3ನೇ ಅಲೆ ಈ ಹಿಂದೆ ಬಂದ ಎರಡನೇ ಅಲೆಯ ಆರ್ಭಟವನ್ನೂ ಮೀರಿಸುತ್ತದೆ : ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ
Dailyhunt
Disclaimer: This content has not been generated, created or edited by Dailyhunt. Publisher: BC Suddi