Dailyhunt Logo
  • Light mode
    Follow system
    Dark mode
    • Play Story
    • App Story
ಏಳು ಜನ ಹಿರಿಯ ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ.! ಹೆಚ್ಚುವರಿ ಜವಾಬ್ದಾರಿ

ಏಳು ಜನ ಹಿರಿಯ ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ.! ಹೆಚ್ಚುವರಿ ಜವಾಬ್ದಾರಿ

ಬೆಂಗಳೂರು: ಕರ್ನಾಟಕ ಸರ್ಕಾರವು ಸೋಮವಾರ ಜುಲೈ 20 ರಾಜ್ಯದ ಆಡಳಿತ ಯಂತ್ರಕ್ಕೆ ಪ್ರಮುಖ ಸರ್ಜರಿ ನಡೆಸಿದ್ದು, ಏಳು ಜನ ಹಿರಿಯ ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಹೆಚ್ಚುವರಿ ಜವಾಬ್ದಾರಿ ನೀಡಿ ಮಹತ್ವದ ಆದೇಶ ಹೊರಡಿಸಿದೆ. ಹಲವು ಇಲಾಖೆಗಳ ನಿರ್ದೇಶಕರು, ಆಯುಕ್ತರು ಹಾಗೂ ಕಾರ್ಯದರ್ಶಿಗಳ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸೇವೆಗಳು-1) ಅಧೀನ ಕಾರ್ಯದರ್ಶಿ ಟಿ. ಮಹಂತೇಶ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಪರವಾಗಿ ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ವರ್ಗಾವಣೆಯಾದ IAS ಅಧಿಕಾರಿಗಳು ಹಾಗೂ ನಿಯೋಜಿತ ಹುದ್ದೆಗಳ ವಿವರ

ನಕುಲ್ ಎಸ್.ಎಸ್.

ಪ್ರಸ್ತುತ ಹುದ್ದೆ: ಕಾರ್ಯದರ್ಶಿ, ಹಣಕಾಸು ಇಲಾಖೆ (ವೆಚ್ಚ)

ಹೊಸ ಹುದ್ದೆ / ಹೆಚ್ಚುವರಿ ಜವಾಬ್ದಾರಿ: ಮುಖ್ಯಮಂತ್ರಿಯವರ ಕಾರ್ಯದರ್ಶಿ, ಕರ್ನಾಟಕ ಸರ್ಕಾರ

ಡಾ. ರಾಮ್ ಪ್ರಸಾತ್ ಮನೋಹರ್ ವಿ.

ಪ್ರಸ್ತುತ ಹುದ್ದೆ: ವ್ಯವಸ್ಥಾಪಕ ನಿರ್ದೇಶಕರು (MD), KPTCL

ಹೊಸ ಹುದ್ದೆ / ಹೆಚ್ಚುವರಿ ಜವಾಬ್ದಾರಿ: ಹಾಲಿ ಹುದ್ದೆಯೊಂದಿಗೆ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ (ಹೆಚ್ಚುವರಿ ಪ್ರಭಾರ)

ಅಭಿರಾಮ್ ಜಿ. ಶಂಕರ್

ಪ್ರಸ್ತುತ ಹುದ್ದೆ: MD, ಕರ್ನಾಟಕ ಗಣಿ ಪರಿಸರ ಪುನಃಸ್ಥಾಪನೆ ನಿಗಮ

ಹೊಸ ಹುದ್ದೆ / ಹೆಚ್ಚುವರಿ ಜವಾಬ್ದಾರಿ: ಹಾಲಿ ಹುದ್ದೆಯೊಂದಿಗೆ ಅಪರ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ, ಹಣಕಾಸು ಇಲಾಖೆ (ಹೆಚ್ಚುವರಿ ಪ್ರಭಾರ)

ಪಾಟೀಲ್ ಯಲಗೌಡ ಶಿವನಗೌಡ

ಪ್ರಸ್ತುತ ಹುದ್ದೆ: ED, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್

ಹೊಸ ಹುದ್ದೆ / ಹೆಚ್ಚುವರಿ ಜವಾಬ್ದಾರಿ: ಹಾಲಿ ಹುದ್ದೆಯೊಂದಿಗೆ MD, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಹಾಗೂ MD, ವೃತ್ತಿಪರ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮ (ಹೆಚ್ಚುವರಿ ಪ್ರಭಾರ)

ಶಿವಪ್ರಸಾದ್ ಪಿ.ಆರ್.ಪ್ರಸ್ತುತ ಹುದ್ದೆ: MD, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC)

ಹೊಸ ಹುದ್ದೆ / ಹೆಚ್ಚುವರಿ ಜವಾಬ್ದಾರಿ: ಹಾಲಿ ಹುದ್ದೆಯೊಂದಿಗೆ ಆಯುಕ್ತರು, ಪ್ರವಾಸೋದ್ಯಮ ಇಲಾಖೆ (ಹೆಚ್ಚುವರಿ ಪ್ರಭಾರ)

ಶೇಖ್ ತನ್ವೀರ್ ಆಸಿಫ್

ಪ್ರಸ್ತುತ ಹುದ್ದೆ: ಹುದ್ದೆ ನಿರೀಕ್ಷೆಯಲ್ಲಿದ್ದರು

ಹೊಸ ಹುದ್ದೆ / ಹೆಚ್ಚುವರಿ ಜವಾಬ್ದಾರಿ: ನಿರ್ದೇಶಕರು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (ANSSIRD), ಮೈಸೂರು

ಯತೀಶ್ ಆರ್.

ಪ್ರಸ್ತುತ ಹುದ್ದೆ: CEO, ಬೆಂಗಳೂರು ನಗರ ಜಿಲ್ಲಾ ಪಂಚಾಯತ್

ಹೊಸ ಹುದ್ದೆ / ಹೆಚ್ಚುವರಿ ಜವಾಬ್ದಾರಿ: ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿ-1 (ಬೆಂಗಳೂರು ನಗರಾಡಳಿತ ಜಿ.ಪಂ. CEO ಹೆಚ್ಚುವರಿ ಪ್ರಭಾರ)

ಶಿಲ್ಪಾ ನಾಗ್

ಪ್ರಸ್ತುತ ಹುದ್ದೆ: ಪಶು ವೈದ್ಯಕೀಯ ಹಾಗೂ ಸೇವೆಗಳ ಇಲಾಖೆ

ಹೊಸ ಹುದ್ದೆ / ಹೆಚ್ಚುವರಿ ಜವಾಬ್ದಾರಿ: MD, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (KSIC) (ಹೆಚ್ಚುವರಿ ಪ್ರಭಾರ)

Dailyhunt
Disclaimer: This content has not been generated, created or edited by Dailyhunt. Publisher: BC Suddi