ಬಿಸಿ ಸುದ್ದಿ

160k Followers

ಎಸ್.ಟಿ. ಎಸ್.ಸಿ. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತಕ್ಕೆ ಅರ್ಜಿ ಆಹ್ವಾನ.! ಕೊನೆ ದಿನಾಂಕ ಪ್ರಕಟ

16 Aug 2021.07:31 AM

ಕೊಪ್ಪ : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 2020 21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 30 ರವರೆಗೆ ಕಾಲಾವಕಾಶ ನೀಡಲಾಗಿತ್ತು, ಇದನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.

ಪರಿಶಿಷ್ಟ ಹಾಗೂ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಎಸ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು. ಈಗಾಗಲೇ ಅರ್ಜಿ ಸಲ್ಲಿಕೆಯ ಅವಧಿಯನ್ನು ಸಾಕಷ್ಟು ಬಾರಿ ವಿಸ್ತರಣೆ ಮಾಡಿತ್ತು, ಇದೀಗ ಕೋವಿಡ್ 19 ಹಿನ್ನೆಲೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 31 ರವರೆಗೆ ಕಾಲಾವಕಾಶ ವಿಸ್ತರಿಸಿ ಆದೇಶ (ORDER) ಹೊರಡಿಸಿದೆ.

ಅರ್ಹ ವಿದ್ಯಾರ್ಥಿಗಳು SSP ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದ್ದು,. ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ https://ssp.postmatric.karnataka.gov.in/ portal ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ..ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಛೇರಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಛೇರಿ ಸಂಪರ್ಕಿಸಬಹುದಾಗಿದೆ.

Post navigation

ಅತಿಥಿ ಶಿಕ್ಷಕರಿಗೆ ಸಂತೋಷದ ಸುದ್ದಿ ನೀಡಿದ್ರು ಸಚಿವ ಬಿ.ಸಿ.ನಾಗೇಶ್ ಪಿಚ್ಚರ್ ಅಭಿ ಬಾಕಿ ಹೈ ಅಂತ ಸಚಿವ ಆನಂದ ಸಿಂಗ್ ಯಾವ ಅರ್ಥದಲ್ಲಿ ಹೇಳಿದ್ದು.?
Disclaimer

Disclaimer

This story is auto-aggregated by a computer program and has not been created or edited by Dailyhunt Publisher: BC Suddi

#Hashtags