Dailyhunt
ಹೊಸದಿಲ್ಲಿ: ರಿಷಭ್‌ ಪಂತ್ ಗೆ ಕೋವಿಡ್ ಪಾಸಿಟಿವ್..!

ಹೊಸದಿಲ್ಲಿ: ರಿಷಭ್‌ ಪಂತ್ ಗೆ ಕೋವಿಡ್ ಪಾಸಿಟಿವ್..!

ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಆಗಸ್ಟ್ 4 ರಿಂದ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿ ನಿಮಿತ್ತ ಟೀಮ್ ಇಂಡಿಯಾ ಆಟಗಾರರು ಇಂದು(ಗುರುವಾರ) ಡುರ್ಹ್ಯಾಮ್ ಗೆ ಪ್ರಯಾಣ ಬೆಳೆಸಲಿದ್ದಾರೆ.

ಆದರೆ, ಕೋವಿಡ್-19 ಪಾಸಿಟಿವ್ ಬಂದಿರುವ ರಿಷಭ್‌ ಪಂತ್ ತಂಡದಿಂದ ದೂರ ಉಳಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮಹತ್ವದ ಟೆಸ್ಟ್ ಸರಣಿ ಆರಂಭವಾಗಲು ಇನ್ನು 20 ದಿನಗಳು ಬಾಕಿ ಇರುವಾಗಲೇ ಟೀಮ್ ಇಂಡಿಯಾ ಕ್ಯಾಂಪ್ ನಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದರಿಂದ ಆಟಗಾರರಲ್ಲಿ ಆತಂಕ ಉಂಟಾಗಿದೆ.

ಆದರೆ ಮೊದಲನೇ ಟೆಸ್ಟ್ ಆರಂಭವಾಗಲು ಇನ್ನೂ ಅವಧಿ ಇದೆ ಅಷ್ಟರಲ್ಲಿ ಇವರು ಚೇತರಿಸಿಕೊಳ್ಳಲಿದ್ದಾರೆಂದು ನಿರೀಕ್ಷಿಸಲಾಗಿದೆ.

ದಲಿತ ಸಮುದಾಯದ ಉದ್ಯಮಿಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಏನು ಯೋಜನೆ ರೂಪಿಸಿದೆ? : ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ

Post navigation

ಲಂಡನ್ : ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡದೆದುರು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು 8 ವಿಕೆಟ್ ಗಳ ಜಯ ಭಾರತ VS ಶ್ರೀಲಂಕಾ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ
Dailyhunt
Disclaimer: This content has not been generated, created or edited by Dailyhunt. Publisher: BC Suddi