ಉತ್ತರ ಕನ್ನಡ: ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ನೀರು ಪಾಲಾಗಿದ್ದು, ಹಲವು ಜನರ ಸ್ಥಿತಿ ಗಂಭೀರವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಘಟನೆ ಸಂಭವಿಸಿದೆ. 14 ಜನರು ಒಟ್ಟಿಗೆ ಬೋಟಿನಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದರು ಎನ್ನಲಾಗ್ತಿದೆ.
ನೀರು ಪಾಲಾದವರು ಭಟ್ಕಳದ ಶಿರಾಲಿ ಮೂಲದವರಾಗಿದ್ದಾರೆ. ಸ್ಥಳಕ್ಕೆ ಭಟ್ಕಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದೆ. ಸ್ಥಳೀಯರಿಂದಲೂ ರಕ್ಷಣಾ ಕಾರ್ಯ ನಡೆದಿದೆ.

