Saturday, 10 Apr, 2.57 pm ಬಿಸಿ ಸುದ್ದಿ

ಹೋಂ
ಕೇಂದ್ರ ಸರ್ಕಾರದ ವಿಫಲ ನೀತಿಗಳು ದೇಶದಲ್ಲಿ ಕೊರೊನಾದ ಎರಡನೇ ಅಲೆಗೆ ಕಾರಣ: ರಾಹುಲ್‌ ವಾಗ್ದಾಳಿ

ನವದೆಹಲಿ : ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಶನಿವಾರ ಮತ್ತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿಫಲ ನೀತಿಗಳು ದೇಶದಲ್ಲಿ ಎರಡನೇ ಕೊರೊನಾ ಅಲೆಯ ಭೀತಿಗೆ ಕಾರಣವಾಗಿದೆ ಎಂದು ಹೇಳಿರುವ ಅವರು, ವಲಸೆ ಕಾರ್ಮಿಕರು ಮತ್ತೆ ಪಲಾಯನ ಮಾಡಬೇಕಾದ ಅಸಹಾಯಕ ಸ್ಥಿತಿ ತಂದೊಡ್ಡಿದೆ ಎಂದು ದೂರಿದ್ದಾರೆ.

ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿರುವ ಅವರು, "ಕೇಂದ್ರ ಸರ್ಕಾರದ ವಿಫಲ ನೀತಿಗಳು ದೇಶದಲ್ಲಿ ಕೊರೊನಾದ ಎರಡನೇ ಅಲೆಗೆ ಕಾರಣವಾಗಿದೆ. ವಲಸೆ ಕಾರ್ಮಿಕರು ಮತ್ತೆ ಪಲಾಯನವಾಗಬೇಕಾದ ಸ್ಥಿತಿ ಎದುರಾಗಿದೆ" ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

"ವ್ಯಾಕ್ಸಿನೇಷನ್ ಹೆಚ್ಚಿಸುವುದರ ಜೊತೆಗೆ, ಅವರ ಕೈಯಲ್ಲಿ ಹಣವನ್ನು ನೀಡುವುದು ಅವಶ್ಯಕವಾಗಿದೆ. ಇದು ಸಾಮಾನ್ಯ ಜನರ ಜೀವನ ಮತ್ತು ದೇಶದ ಆರ್ಥಿಕತೆಗಾಗಿ ಮಾಡಬೇಕಾದ ಕಾರ್ಯವಾಗಿದೆ" ಎಂದು ಹೇಳಿರುವ ಅವರು, "ಆದರೆ ಅಹಂಕಾರಿ ಸರ್ಕಾರವು ಉತ್ತಮ ಸಲಹೆಗಳನ್ನು ಪಡೆಯುವುದರ ಬಗ್ಗೆ ಅಲರ್ಜಿ ಹೊಂದಿದೆ" ಎಂದು ಲೇವಡಿ ಮಾಡಿದ್ದಾರೆ.

ಶುಕ್ರವಾರವೂ ಕೂಡಾ ರಾಹುಲ್‌ ಗಾಂಧಿ ಅವರು ಕೊರೊನಾ ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು. "ಲಸಿಕೆ ಕೊರತೆಯು ಬೆಳೆಯುತ್ತಿರುವ ಕೊರೊನಾ ಬಿಕ್ಕಟ್ಟಿನಲ್ಲಿ ಬಹಳ ಗಂಭೀರ ಸಮಸ್ಯೆಯಾಗಿದೆ, ಅದು ಉತ್ಸವ ಅಲ್ಲ. ನಮ್ಮ ದೇಶವಾಸಿಗಳನ್ನು ಅಪಾಯಕ್ಕೆ ದೂಡಿ ಲಸಿಕೆ ರಫ್ತು ಮಾಡುವುದು ಸರಿಯೇ?" ಎಂದು ಪ್ರಶ್ನಿಸಿದ್ದರು. "ಕೇಂದ್ರ ಸರ್ಕಾರ ಪಕ್ಷಪಾತವಿಲ್ಲದೆ ಎಲ್ಲ ರಾಜ್ಯಗಳಿಗೆ ಸಹಾಯ ಮಾಡಬೇಕು. ನಾವೆಲ್ಲರೂ ಒಟ್ಟಾಗಿ ಈ ಸಾಂಕ್ರಾಮಿಕವನ್ನು ಸೋಲಿಸಬೇಕು" ಎಂದು ಹೇಳಿದ್ದರು.

ಕೆಂಪಿರುವೆಯ 'ಕುಕುಟಿ ಚಟ್ನಿ' ತಿಂದ್ರೆ ಕೊರೊನಾ ಸೋಂಕು ಮಾಯಾ..! ಎಂಬ ಅರ್ಜಿಯನ್ನು ವಜಾಗೊಳಿಸಿದ ಒಡಿಶಾ ಹೈಕೋರ್ಟ್‌

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: BC Suddi
Top