Dailyhunt
ಶ್ರೀನಗರದ ಖನ್ಯಾರ್‌ನಲ್ಲಿ ಉಗ್ರರ ದಾಳಿ - ಓರ್ವ ಪೊಲೀಸ್ ಗೆ ಗಾಯ

ಶ್ರೀನಗರದ ಖನ್ಯಾರ್‌ನಲ್ಲಿ ಉಗ್ರರ ದಾಳಿ - ಓರ್ವ ಪೊಲೀಸ್ ಗೆ ಗಾಯ

ಶ್ರೀನಗರ : ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡ ಘಟನೆ ಶ್ರೀ ನಗರದ ಖನ್ಯಾರ್ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿ, "ಭಾನುವಾರ ಮಧ್ಯಾಹ್ನ ಖನ್ಯಾರ್‌ನಲ್ಲಿ ಭಯೋತ್ಪಾದಕರು ಪೋಲಿಸ್ ನಾಕಾ ಪಾರ್ಟಿಯ ಮೇಲೆ ಗುಂಡು ಹಾರಿಸಿದದ್ದು, ದಾಳಿಯಲ್ಲಿ ಖನ್ಯಾರ್‌ನ ಪಿಎಸ್‌ಐ ಅರ್ಷಿದ್ ಅಹ್ಮದ್ ಅವರು ಗಾಯಗೊಂಡಿದ್ದಾರೆ" ಎಂದು ಹೇಳಿದ್ದಾರೆ.

ಇನ್ನು ಗಾಯಗೊಂಡ ಅಧಿಕಾರಿಯನ್ನು ಚಿಕಿತ್ಸೆಗಾಗಿ ಎಸ್‌ಎಮ್‌ಎಚ್‌ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ದಾಳಿಕೋರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿಲಾಗಿದೆ.

Post navigation

ನವದೆಹಲಿ : ಭಾರೀ ಮಳೆಯ ನಡುವೆಯೇ ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ! ಭದ್ರಾವತಿ : 150 ನಾಯಿಗಳನ್ನು ಜೀವಂತವಾಗಿ ಹೂತ ದುರುಳರು: 12 ಜನರ ಬಂಧನ..!
Dailyhunt
Disclaimer: This content has not been generated, created or edited by Dailyhunt. Publisher: BC Suddi