ಹೋಂ
ಟೊಮಾಟೋದಲ್ಲಿನ ಸಮಗ್ರ ಪೀಡೆ ನಿರ್ವಹಣೆಗೆ ಮಾಹಿತಿ.!

ಚಿತ್ರದುರ್ಗ; ಟೊಮಾಟೋದಲ್ಲಿನ ಸಮಗ್ರ ಪೀಡೆ ನಿರ್ವಹಣೆ ಕುರಿತು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವತಿಯಿಂದ ಜಿಲ್ಲೆಯ ರೈತರಿಗೆ ಸಲಹೆ ನೀಡಲಾಗಿದೆ.
ಟೊಮಾಟೋದಲ್ಲಿನ ಸಮಗ್ರ ಪೀಡೆ ನಿರ್ವಹಣೆಗೆ ಎತ್ತರವಾದ ಮಡಿಗಳನ್ನು ನಿರ್ಮಾಣ ಮಾಡಬೇಕು. ಸಾಲಾಗಿ ಬೀಜಗಳನ್ನು ಬಿತ್ತಬೇಕು. ಗಿಡ ಮೊಳಕೆ ಬಂದ ಮೇಲೆ ಒಂದು ಲೀಟರ್ ನೀರಿಗೆ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಹಾಕಿ ಸಿಂಪಡಿಸಬೇಕು. ಬೀಜ ಮೊಳಕೆ ಬಂದು 15 ದಿನಗಳಾಗಿರುವಾಗ ಒಂದು ಲೀಟರ್ ನೀರಿಗೆ 0.3 ಮಿಲಿ ಲೀಟರ್, ಥಯೋಮೆತೋಕ್ಸಾಮ್ ಅಥವಾ ಇಮಿಡಾಕ್ಲೋಪ್ರಿಡ್ ಎಂಬ ಕೀಟನಾಶಕವನ್ನು ಹಾಕಿ ಸಿಂಪಡಣೆ ಮಾಡಬೇಕು. ನಾಟಿ ಮಾಡುವಾಗ ಗಿಡಗಳ ಬೇರುಗಳನ್ನು ಮಾತ್ರ 15 ನಿಮಿಷಗಳ ಕಾಲ ಥಯೋಮೆತೋಕ್ಸಾಮ್ ಅಥವಾ ಇಮಿಡಾಕ್ಲೋಪ್ರಿಡ್ ಕೀಟನಾಶಕದಲ್ಲಿ ಅದ್ದಿದ ನಂತರ ನಾಟಿ ಮಾಡಬೇಕು. ಮತ್ತು ನಾಟಿ ಮಾಡುವಾಗ ಒಳ್ಳೆ ವಾಸನೆ ಇರುವ ಬೇವಿನ ಹಿಂಡಿಯನ್ನು ಇದರಲ್ಲಿ ಶೇಕಡಾ 8ರಷ್ಟು ಎಣ್ಣೆ ಇರುವುದನ್ನು ಒಂದು ಎಕರೆಗೆ 100 ಕಿಲೋಗ್ರಾಂ ನಷ್ಟು ಮಣ್ಣಿಗೆ ಸೇರಿಸಿ ಸಾಲು ಮಾಡಬೇಕು.
ಹೈಬ್ರಿಡ್ ಗಿಡಗಳನ್ನು 90/100 ಸೆಂ.ಮೀಟರ್ ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿ 15 ದಿನಳಾಗಿರುವಾಗ 1 ಲೀಟರ್ ನೀರಿಗೆ 0.3ಮಿಲಿ ಲೀಟರ್ ಥಯೋಮೆತೋಕ್ಸಾಮ್ ಅಥವಾ ಇಮಿಡಾಕ್ಲೋಪ್ರಿಡ್ ಕೀಡನಾಶಕವನ್ನು ಹಾಕಿ ಸಸಿಗಳಿಗೆ ಸಿಂಪಡಿಸಬೇಕು. ರಂಗೋಲಿ ಹುಳದ ಹತೋಟಿಗೆ ಅಗತ್ಯವಿದ್ದರೆ ಮಾತ್ರ ಶೇಕಡಾ 4ರಷ್ಟು ಬೇವಿನ ಬೀಜದ ರಸ ಅಥವಾ ಶೇಕಡಾ 1ರಷ್ಟು ಬೇವಿನ ಸೋಪು ಅಥವಾ ಹೊಂಗೆ ಸೋಪು ಸಿಂಪಡಣೆ ಮಾಡಬೇಕು.
ಹೂ ಬರುವ ಸಮಯದಲ್ಲಿ ನಾಟಿ ಮಾಡಿ 20 ದಿನಗಳಾಗಿರುವಾಗ ಶೇಕಡಾ 8ರಷ್ಟು ಎಣ್ಣೆ ಇರುವ ಬೇವಿನ ಹಿಂಡಿಯನ್ನು 1 ಎಕರೆಗೆ 100 ಕಿ.ಗ್ರಾಂ ಮಣ್ಣಿಗೆ ಸೇರಿಸಿ ಸಾಲು ಮಾಡಬೇಕು. ನಾಟಿ ಮಾಡಿ 28, 35 ಮತ್ತು 42 ದಿನಗಳಾಗಿರುವಾಗ ಸಾಯಂಕಾಲವೇ ನ್ಯೂಕ್ಲಿಯರ್ ಪ್ಲೋಹೆಡ್ರೋಸಿಸ್ ವೈರಸ್(ಎಚ್-ಎನ್.ಪಿ.ವಿ) 250 ಎಲ್.ಇ. ಪ್ರತಿ ಹೆಕ್ಟರ್‍ಗೆ ಶೇಕಡಾ 2ರಷ್ಟು ಬೆಲ್ಲ ಮತ್ತು 0.5 ಮಿಲಿಲೀಟರ್ ಅಂಟು ಸೇರಿಸಿ ಸಿಂಪಡಣೆ ಮಾಡುವುದು. ಕಾಯಿಕೊರಕ ಹುಳುವಿರುವ ಕಾಯಿಗಳನ್ನು ಹುಡುಕಿ ಕಿತ್ತು, ಕೀಟ ಸಹಿತ ನಾಶಮಾಡಬೇಕು. ಮಲ್ಲೆ ರೋಗ ಬಂದಿರುವ ಗಿಡಗಳನ್ನು ರೋಗ ಬಂದ ತಕ್ಷಣ ಕಿತ್ತು ನಾಶ ಮಾಡಬೇಕು. ಗಿಡದ ಬುಡದಲ್ಲಿರುವ ಹಳೆಯ ಮತ್ತು ರೋಗವಿರುವ ಎಲೆಗಳನ್ನು ತೆಗೆದು ನಾಶಪಡಿಸಬೇಕು. ಅಂಗಮಾರಿ ರೋಗಕ್ಕೆ 2ಗ್ರಾಂ, ಮ್ಯಾಂಕೊಜೆಬ್ ಅಥವಾ 2 ಮಿಲಿ ಲೀಟರ್ ಕ್ಲೋರೋಥಾಲೋನಿಲ್ ಶಿಲೀಂಧ್ರ ನಾಶಕವನ್ನು ಪ್ರತಿ ಲೀಟರ್‍ಗೆ ಬೆರೆಸಿ ಸಿಂಪಡಿಸಬೇಕು. ಬೂದು ರೋಗಕ್ಕೆ ಒಂದು ಲೀಟರ್ ನೀರಿಗೆ 1 ಮಿಲಿ ಲೀಟರ್ ಡೈನೋಕಾಪ್ ಅಥವಾ ಕಾಪರ್ ಆಕ್ಸಿಕ್ಲೋರೈಡ್‍ನ್ನು ಒಂದು ಲೀಟರ್ ನೀರಿಗೆ 3 ಗ್ರಾಂ ಬೆರೆಸಿ ಸಿಂಪಡಿಸಬೇಕು. ಕಾಯಿ ಕೊಳೆ ರೋಗಕ್ಕೆ ಒಂದು ಲೀಟರ್ ನೀರಿಗೆ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಸಿಂಪಡಿಸಬೇಕು. ಬೆಂಕಿ ರೋಗ ಬಂದಂತಹ ಗಿಡಗಳನ್ನು ಜಮೀನಿನಲ್ಲಿ ಹಾಗೇ ಬಿಡದೆ ಕಿತ್ತು ತೆಗೆಯಬೇಕು. ಕಾಯಿ ತೊಟ್ಟಿನಲ್ಲಿ ಕಪ್ಪಗುವುದು ಕಂಡು ಬಂದಲ್ಲಿ ಇಪ್ರೋಡಿಯೋನ್ ಮತ್ತು ಕಾರ್ಬೆಂಡೆಜೆಮ್‍ಯನ್ನು ಲೀಟರ್‍ಗೆ 2 ಗ್ರಾಂ ಸಿಂಪಡಣೆ ಮಾಡಬೇಕು. ಕೆಂಪು ನುಶಿ ಪೀಡೆಯ ಹತೋಟಿಗೆ ಒಂದು ಲೀಟರ್ ನೀರಿಗೆ 10 ಗ್ರಾಂ ಹೊಂಗೆ ಸೋಪು ಅಥವಾ ಬೇವಿನಿಂದ ಎಲೆಯ ಕೆಳ ಭಾಗ ಚೆನ್ನಾಗಿ ನೆನೆಯುವಂತೆ ಸಿಂಪಡಿಸಿ, ವಿಪರೀತ ಕೆಂಪು ನುಸಿ ಕಾಟವಿದ್ದರೆ, 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 2.5 ಮಿಲಿ ಲೀಟರ್ ಡೈಕೋಪಾಲ್ ಮತ್ತು ಹೊಂಗೆ ಸೋಪು ಅಥವಾ ಬೇವಿನ ಸೋಪು ಒಂದು ಲೀಟರ್ ನೀರಿಗೆ 5 ಗ್ರಾಂ ಸೇರಿಸಿ ಸಿಂಪಡಿಸಬೇಕು. ಬ್ಯಾಕ್ಟೀರಿಯಲ್ ವಿಲ್ಟ್ ತೊಂದರೆ ಇದ್ದಲ್ಲಿ ಈ ರೋಗ ನಿರೋಧಕ ಶಕ್ತಿ ಇರುವ ತಳಿಗಳನ್ನೇ ಬಳಸಬೇಕು. ಮತ್ತು ಕ್ಯಾಲ್ಸಿಯಮ್ ಕೊರತೆ ಇದ್ದಲ್ಲಿ ಒಂದು ಎಕರೆ ಭೂಮಿಗೆ 40 ಕಿ.ಗ್ರಾಂ ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್(ಸಿ.ಎ.ಎನ್) ರಸ ಗೊಬ್ಬರ ಹಾಕಿ ಅಥವಾ ಬೆಳೆಗೆ ಲೀಟರ್‍ಗೆ 3 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ಸಿಂಪಡಿಸಬೇಕು ಹಾಗೂ ಕೀಟ ನಾಶಕ ಮತ್ತು ಶಿಲೀಂದ್ರ ನಾಶಕಗಳನ್ನು ಸಣ್ಣ ಪ್ರಮಾಣದಲ್ಲಿ ಪ್ರಾತ್ಯಕ್ಷತೆ ಮಾಡಿ ನಂತರ ಬೆಳೆಗಳಿಗೆ ಸಿಂಪಡಿಸುವುದು ಸೂಕ್ತ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡುವಂತೆ, ಮೊಬೈಲ್ ಸಂಖ್ಯೆ 8310656925ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕ